ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರಪ್ರಶಸ್ತಿ 2025 ಪ್ರದಾನ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸರ್ವೇ ಜನ ಆರ್ಟ್ಸ್ ಮತ್ತುಕಲ್ಚರ್ ಇದರ ಸಹಭಾಗಿತ್ವದಲ್ಲಿ 8ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಮಹೋತ್ಸವ ಅಂಗವಾಗಿ ನಾಡಿನಗಾಗಿ ನಾಡಿನ ಏಳಿಗೆಗಾಗಿ ಗಣನೀಯ ಸೇವೆ ಸಲ್ಲಿಸಿದ ಪತ್ರಿಕೋದ್ಯಮ, ಸಾಹಿತ್ಯ ,ಸಂಘಟನೆ ಸಮಾಜಸೇವೆಗಾಗಿ ಮಾಜಿ ಮುಖ್ಯಮಂತ್ರಿ ವಿಧಾನಸೌಧ ನಿರ್ಮಾತ್ ದಿವಂಗತ ಶ್ರೀ ಕೆಂಗಲ್ ಹನುಮಂತಯ್ಯ ಸದ್ಭಾವನ ರಾಷ್ಟ್ರ ಪ್ರಶಸ್ತಿಯನ್ನು ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಬೆಂಗಳೂರಿನ ಕನ್ನಡ ಭವನದಲ್ಲಿ ಇತ್ತೀಚೆಗೆ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಖ್ಯಾತ ಗಾಯಕ ಶಶಿಧರ ಕೋಟೆ ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ಚಲನ ಚಿತ್ರ ನಟ ಶಿವಕುಮಾರ ಆರಾಧ್ಯ ,ಹೊಸಮಠ ಮಹಾಸ್ವಾಮಿಗಳಾದ ಬಸವ ಶಾಂತಲಿಂಗ ಮಹಾಸ್ವಾಮಿಗಳು ,ಡಾ. ಪುತ್ತೂರಾಯ ಡಾ. ಕೆಂಚನೂರು ಶಂಕರ್. ಲಷೀತಾ ಗಂಗಾವತಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!