ಮೋಹನ್‌ ಲಾಲ್‌ ಸಿನಿಮಾ ವೀಕ್ಷಣೆಗೆ ಕಾಲೇಜಿಗೆ ರಜೆ ನೀಡಿದ ಬೆಂಗಳೂರಿನ ಕಾಲೇಜ್!

ಮೋಹನ್‌ ಲಾಲ್‌ ಸಿನಿಮಾ ವೀಕ್ಷಣೆಗೆ ಕಾಲೇಜಿಗೆ ರಜೆ ನೀಡಿದ ಬೆಂಗಳೂರಿನ ಕಾಲೇಜ್!

ಬೆಂಗಳೂರು: ಬೆಂಗಳೂರಿನ ಕಾಲೇಜೊಂದು ವಿದ್ಯಾರ್ಥಿಗಳಿಗೆ ಉಚಿತ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದಲ್ಲದೆ ಸಿನಿಮಾ ನೋಡಲು ಇಡೀ ಕಾಲೇಜಿಗೆ ರಜೆ ಘೋಷಿಸಿದೆ. ಮಲಯಾಳಂ ನಟ ಮೋಹನ್‌ ಲಾಲ್‌ ಅವರು ನಟಿಸಿರುವ L2: ಎಂಪುರಾನ್ ಸಿನಿಮಾ ನೋಡಿ ಎಂಜಾಯ್‌ ಮಾಡಲು ಮಾರ್ಚ್ 27ರಂದು ರಜೆ ಘೋಷಿಸಿದೆ, ಕಾಲೇಜು ಆಡಳಿತ ಮಂಡಳಿಯೇ ವಿದ್ಯಾರ್ಥಿಗಳಿಗೆ ಫ್ರೀ ಟಿಕೆಟ್‌ ಕೂಡ ಕೊಟ್ಟು ಕಳಿಸುತ್ತಿದೆ.

ಬೆಂಗಳೂರಿನಲ್ಲಿರುವ ಗುಡ್ ಶೆಫರ್ಡ್ ಕಾಲೇಜು ತನ್ನ ಎಲ್ಲ ವಿದ್ಯಾರ್ಥಿಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿದೆ ಎಂದು ವರದಿಯಾಗಿದೆ. ಅದರಲ್ಲಿ ನಮ್ಮ ಪ್ರೀತಿಯ ಮೋಹನ್ ಲಾಲ್ ಅವರ ಪ್ರತಿಭೆ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ದಾರ್ಶನಿಕ ನಿರ್ದೇಶನವನ್ನು ಗೌರವಿಸಲು ಎಂಪೂರನ್ ಸಿನಿಮಾದ ವಿಶೇಷ ಸಿನಿಮಾ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಇದು ಕೇವಲ ಒಂದು ಸಿನಿಮಾವಲ್ಲ ಒಂದು ವಿದ್ಯಮಾನ ಎಂದು ಹೇಳಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ವೈಜಿಆರ್ ಮಾಲ್‌ನ ಮೂವೀಟೈಮ್ ಸಿನಿಮಾಸ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7 ಗಂಟೆಯ ಪ್ರದರ್ಶನವನ್ನು ಆಡಳಿತ ಮಂಡಳಿ ಕಾಯ್ದಿರಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ಕಾಲೇಜು ಆಡಳಿತ ಮಂಡಳಿಯ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

error: Content is protected !!