ಡಾ.ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿರಾತ್ ಸ್ಪರ್ಧೆ, ಇಫ್ತಾರ್ ಕೂಟ


ಜಿದ್ದಾ: ಡಾ.ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿರತ್ ಸ್ಪರ್ಧೆ ಹಾಗೂ ಇಫ್ತಾರ್ ಕೂಟ ಸೌದಿ ಅರೇಬಿಯಾದ ಜಿದ್ದಾ ಪ್ಯಾಲೇಸ್ ಗ್ರಾಂಡ್ ಡೈಮಂಡ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್ , ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ನ ಅಧ್ಯಕ್ಷ ಪ್ರೊ. ಯು.ಟಿ ಇಫ್ತಿಕಾರ್ ಅಲಿ ಫರೀದ್ , ಗ್ರೇ ಲೈನ್ ಸಂಸ್ಥೆಯ ಉಪಾಧ್ಯಕ್ಷ ಸೈಫುಲ್ಲಾ ಅಲಿ ಅಲ್-ಅಂಬ್ರಿ, ಮಾಜಿ ಶಾಸಕ ಮೊದ್ದೀನ್ ಬಾವಾ , ಬಾಫ್ಕೋ ಇಂಟರ್ನ್ಯಾಷನಲ್ ಶಿಪ್ಪಿಂಗ್ ನ ಅಡಳಿತ ನಿರ್ದೇಶಕ ಮೊಹಮ್ಮದ್ ಅಸ್ಲಂ ಖಾಝಿ, ಬ್ರಿಜ್ ವೇ ಸಮೂಹ ಸಂಸ್ಥೆಯ ನಿರ್ದೇಶಕ ಜಾವೀದ್ ಅಬ್ದುಲ್ ವಹಾಬ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಡಾ. ಅಬ್ದುಲ್ ಶಕೀಲ್ ರವರ ಶಿಕ್ಷಣ ಹಾಗೂ ಅರೋಗ್ಯದ‌ ಬಗ್ಗೆ ದೂರದೃಷ್ಟಿ ನೋಡಿದಾಗ ಮುಂದಿನ ದಿನಗಳಲ್ಲಿ ಉತ್ತಮ ರೀತಿಯ ಯೋಜನೆ ಗಳನ್ನು ರೂಪಿಸಲಿದ್ದಾರೆ. ಯುವ ಉದ್ಯಮಿಗಳು ಕ್ರೀಡೆಗೆ ಮಹತ್ವ ನೀಡುವ ಕಾಲದಲ್ಲಿ ಶಕೀಲ್ ರವರು ಕಿರಾತ್ ಸ್ಪರ್ಧೆ ಅಯೋಜಿಸುವ ಮೂಲಕ ಇತರ ಉದ್ಯಮಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಡಾ.ಅಬ್ದುಲ್ ಶಕೀಲ್‌ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಾ‌.ಅಬ್ದುಲ್ ಶಕೀಲ್ ಪ್ರಾಸ್ತಾವಿಕ ‌ಮಾತುಗಳನ್ನಾಡಿದರು.

ಅಬ್ದುಲ್ಲಾ ಯೂಸುಫ್ ಅಲ್-ಹಾಸಿಮಿ, ಒಸಾಮಾ ಹನೀಫ್ ಖುರೈಸಿ, ಹಾಗೂ ಅಬ್ಬಾಸ್ ಮುಝಮಿಲ್ ಮದನಿ ತೀರ್ಪುಗಾರಿಕೆಯಲ್ಲಿ ನಡೆದ ಕಿರಾತ್ ಸ್ಪರ್ಧೆಯಲ್ಲಿ ಮರಿಯಂ ಅಲಿ ಪ್ರಥಮ ಅಮೀನ್ ಸದಾತ್ ದ್ವೀತಿಯ ಹಾಗೂ ನದೀಮ್ ನೌರೀಶ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಉದ್ಯಮಿ ಝೈನುದ್ದೀನ್ ಮುನ್ನೂರು, ಜಮಿಯ್ಯತುಲ್ ಫಲಹಾದ ಸಹೂದ್ ಶೇಕ್, ಹಿದಾಯ ಫೌಂಡೇಶನ್ ನ ಅಝೀಝುದ್ದೀನ್, ಕರ್ನಾಟಕ ಎನ್ ಆರ್ ಐ ಫೋರಂನ ಮನ್ಸೂರು, ಬಾಮಾ ಅಸೋಸಿಯೇಷನ್ ನ ಶರೀಫ್ ಫಾಲ್ಕೋನ್, ಭಟ್ಕಳ ಅಸೋಸಿಯೇಷನ್ ನ ಕಮಾರ್ ಸದಾ, ಮಲೆನಾಡ ಅಸೋಸಿಯೇಷನ್ ನ ಜಲಾಲ್ ಉಪಸ್ಥಿತರಿದ್ದರು.
ಫತ್ ಮೊಹಮ್ಮದ್ ವಂದಿಸಿದರು.
ಸಲೀಂ ಗಾನಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!