ಬಹು ಅಂಗಾಂಗ ವೈಫಲ್ಯದಿಂದ ಪೀಡಿತರಾಗಿದ್ದ ರೋಗಿಗೆ ಮೆಡಿಕವರ್ ಆಸ್ಪತ್ರೆಯಲ್ಲಿ ಸೂಪರ್‌ಫಾಸ್ಟ್ ಚಿಕಿತ್ಸೆ – ವೈದ್ಯರ ವೈಜ್ಞಾನಿಕ ಕೌಶಲ್ಯದಿಂದ ಜಯ!


ವೈಟ್‌ ಫೀಲ್ದ್‌ ,ಬೆಂಗಳೂರು: ಬರೀ ಕೀಲು ನೋವು ಅಂದುಕೊಂಡು ಚಿಕಿತ್ಸೆಗೆ ಬಂದ ರೋಗಿಗೆ,ಬಹು ಅಂಗಾಂಗ ವೈಪಲ್ಯಗೊಂಡಿರುವುದನ್ನು ಮೆಡಿಕವರ್‌ ಆಸ್ಪತ್ರೆಯ ವೈದ್ಯರು ಧೃಡಪಡಿಸಿದ್ದಾರೆ.

48ವರ್ಷದ ರೋಗಿಯೂ ಬೇರೆ ಆಸ್ಪತ್ರೆಯಲ್ಲಿ ಕೀಲು ನೋವೆಂದು ಚಿಕಿತ್ಸೆ ಪಡೆಯುತ್ತಾ ಇದ್ದರು . ಆದ್ರೆ ಅವರು ಪಡೆಯುತ್ತಿದ್ದ ಚಿಕಿತ್ಸೆಯಿಂದ ಯಾವುದೇ ಪರಿಣಾಮಕಾರಿ ಸುಧಾರಣೆ ಆರೋಗ್ಯದಲ್ಲಿ ಕಂಡು ಬಾರದ ಕಾರಣ ವೈಟ್‌ ಫೀಲ್ಡ್‌ ನಲ್ಲಿರುವ ಮೆಡಿಕವರ್‌ ಆಸ್ಪತ್ರೆಯ ಹಿರಿಯ ಸಲಹೆಗಾರ ವೈದ್ಯರಾದ ಡಾ. ರಾಜ ಸ್ವೆಲ್ವರಾಜನ್‌ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರ ಕೀಲು ನೋವಿಗೆ ಕಾರಣವೇನೆಂದು ತಿಳಿಯಲು ಬೇರೆ ಬೇರೆ ವಿಧಗಳ ಚಿಕಿತ್ಸೆ ನಡೆಸಿದ ಬಳಿಕ ರೋಗಿಯೂ ಬಹು ಅಂಗಾಗ ವೈಪಲ್ಯದಿಂದ ಬಳಲುತ್ತಾ ಇದ್ದಾರೆ ಅನ್ನೋದು ತಿಳಿದುಬಂದಿದೆ.

ಮೆಡಿಕವರ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ರೋಗಿಯ ಆರೋಗ್ಯದ ಸ್ಥಿತಿ ಸಾಕಷ್ಟು ಹದಗೆಟ್ಟ ಕಾರಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಅವರಿಗೆ ಉಸಿರಾಟದ ತೊಂದರೆ ಮತ್ತು ರಕ್ತದೊತ್ತಡದ ಸಮಸ್ಯೆ ಇದ್ದ ಕಾರಣ ಅವರನ್ನು ವಾರ್ಡ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಯಿತು. ಅವರಿಗೆ ಸೆಪ್ಸಿ ಎಂಬ ರಕ್ತದ ಸೋಂಕು ಉಂಟಾಗಿದ್ದು,ಈ ಸೋಂಕಿನಿಂದ ಬಾಕ್ಟೀರಿಯಾ ರೋಗಿಯ ದೇಹದಲ್ಲಿ ಹಿಮೋಗ್ಲೋಬಿನ್‌ ನಿಲ್ಲೋದಕ್ಕೆ ಬೀಡುತ್ತಇರಲಿಲ್ಲ . ಎಷ್ಟು ರಕ್ತ ಕೊಟ್ಟರು ಸಾಕೇ ಆಗುತ್ತಾ ಇರಲಿಲ್ಲ. ಹಾಗಾಗೀ ಈ ಸಮಸ್ಯೆಗೆ ಪರಿಹಾರ ಮಾಡಿ ರೋಗಿಯನ್ನು ಆರೋಗ್ಯಕರ ಮಾಡೋದು ವೈದ್ಯಲೋಕಕ್ಕೆ ದೊಡ್ಡ ಸವಾಲಾಗಿತ್ತು. ಸಿಸ್ಟಮಿಕ್‌ ಲೂಪಸ್‌ ಎರಿಥೆಮಾಟೋಸಸ್‌(ಎಸ್‌ ಎಲ್‌ ಇ) ಹಾಗೂ ಆಟೋ ಇಮ್ಯೂನ್‌ ಹೆಮೋಲಿಟಿಕ್‌ ಅನೀಮಿಯಾ ಎರಡು ಸೇರಿಕೊಂಡಿರೋದು ರೋಗಿಗೆ ಸಾಕಷ್ಟು ಭಾಧೆ ನೀಡುತ್ತಾ ಇತ್ತು . ಇದು ಬೇರೆ ಬೇರೆ ಅಂಗಾಗಗಳಿಗೆ ತೊಂದರೆಯನ್ನು ಮಾಡುತ್ತಾ ಇತ್ತು. ಪ್ಯಾನ್ಸೈಟೋಪೀನಿಯಾ( ಎಲ್ಲಾ ರಕ್ತ ಕಣಗಳು ಕಡಿಮೆ ಇರೋದು) ಮತ್ತು ಕಿಡ್ನಿ ವೈಫಲ್ಯ ಆಗಿರೋದು ಕೂಡ ತಿಳಿದು ಬಂದಿತ್ತು. ಸೆಪ್ಸಿಸ್, ಎಸ್‌ಎಲ್‌ಇ ತೀವ್ರ ಸಮಸ್ಯೆಯಿಂದ ಥ್ರಾಂಬೋಟಿಕ್ ಮೈಕ್ರೋಆಂಜಿಯೋಪಥಿ (TMA) ಮತ್ತು ಬಹು ಅಂಗಾಂಗ ಸಮಸ್ಯೆಯಿಂದ ರೋಗಿಯೂ ಬಳಲುತ್ತಾ ಇದ್ದರು ಎಂದು ಹಿರಿಯ ಸಲಹೆಗಾರ ವೈದ್ಯರಾದ ರಾಜ ಸ್ವೆಲ್ವರಾಜನ್‌ ತಿಳಿಸಿದ್ದಾರೆ.

ಮೂತ್ರ ಪಿಂಡದ ಸಮಸ್ಯೆ ಇದ್ದು , ಅದು 2ನೇ ಹಂತಕ್ಕೆ ತಲುಪಿತ್ತು, ಮೆಟಬಾಲಿಕ್ ಆಮ್ಲೀಯತೆ ಕಡಿಮೆಯಾಗ್ತಾ ಇತ್ತು .ಯಕೃತ ಸಮಸ್ಯೆ ಹಾಗೂ ಉಸಿರಾಟದ ತೊಂದ್ರೆ ಕೂಡ ಇತ್ತು .ಅಲ್ಲದೇ ಅವರು ತೀವ್ರ ಮಾನಸಿಕ ತೊಂದ್ರೆಯಿಂದ ಕೂಡ ಬಳಲುತ್ತಾ ಇದ್ದರು . ಕಿಡ್ನಿ ವೈಪಲ್ಯ ಹಾಗೂ ಉಸಿರಾಟದ ತೊಂದರೆಗಾಗಿ RRT (Renal Replacement Therapy) ನಡೆಸಲಾಯಿತು. ಬ್ರಾಂಕೊಸ್ಕೊಪಿಯಲ್ಲಿ ಡಿಫ್ಯೂಸ್ ಅಲ್ವಿಯೋಲರ್ ಹೆಮರೆಜ್ ಪತ್ತೆಯಾಯಿತು.ಬಳಿಕ ಪ್ಲಾಸ್ಮಾಫೆರಿಸಿಸ್ ಪ್ರಾರಂಭಿಸಲಾಯಿತು, ನಂತರ IVIG ನೀಡಲಾಯಿತು. ರೋಗಿಯ ಸ್ಥಿತಿ ದಿನೇ ದಿನೇ ಸುಧಾರಣೆಯಾಗುತ್ತ ಇದ್ದ ಹಾಗೆ ಅವರನ್ನು ಐಸಿಯು ಇಂದ ವಾರ್ಡ್‌ ಗೆ ಶಿಫ್ಟ್‌ ಮಾಡಿ ಬಳಿಕ ಮನೆಗೆ ಕಳುಹಿಸಿಕೊಡಲಾಗಿದೆ. ಈಗ ಅವರ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆಯಾಗಿದೆ ಎಂದು ಹಿರಿಯ ಸಲಹೆಗಾರ ವೈದ್ಯ ಡಾ . ರಾಜ ಸ್ವೆಲ್ವರಾಜನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಮೆಡಿಕವರ್‌ ಆಸ್ಪತ್ರೆಯ ವೈದ್ಯಕೀಯ ತಂಡವಾದ ಡಾ. ರವಿಶಂಕರ್‌ ಸಿನಿಯರ್‌ ಕನ್ಸಲ್ಟೆಂಟ್‌ ನೆಫ್ರಾಲಜಿಸ್ಟ್‌ , ಹಾಗೂ ಡಾ. ಮಂಜುನಾಥ್‌ ಬಿಜಿ, ಶ್ವಾಸಕೋಶಶಾಸ್ತ್ರಜ್ಞರವರು ಕೂಡ ರೋಗಿಯನ್ನು ಸಂಪೂರ್ಣವಾಗಿ ರೋಗಮುಕ್ತ ಮಾಡೋಕೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಡಾ. ರಾಜ ಸ್ವೆಲ್ಪರಾಜನ್‌ ತಿಳಿಸಿದ್ದಾರೆ.

error: Content is protected !!