ಶರವೇಗದಲ್ಲಿ ನುಗ್ಗಿ ಬರುತ್ತಿರುವ ಕ್ಷುದ್ರಗ್ರಹ ಕಂಡು ಬೆಚ್ಚಿಬಿದ್ದ ನಾಸಾ: ಭೂಮಿಯ ಚಲನೆಯ ಪಥ ಬದಲಾವಣೆ, ಜೀವಸಂಕುಲಗಳು ಸರ್ವ ನಾಶ?!

ನ್ಯೂಯಾರ್ಕ್: ಬೃಹತ್ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಯತ್ತ ಶರವೇಗದಲ್ಲಿ ನುಗ್ಗಿ ಬರುತ್ತಿರುವ ದೃಶ್ಯ ಕಂಡು ಬೆಚ್ಚಿ ಬಿದ್ದಿರುವ ನಾಸಾ ವಿಜ್ಞಾನಿಗಳು ಭೂಮಿ ತನ್ನ ಚಲನೆಯ ಪಥವನ್ನೇ ಬದಲಾಯಿಸಲಿದ್ದು, ಜೀವ ಸಂಕುಲಗಳ ಮೇಲೆ ಗಂಭೀರ ಪರಿಣಾಮ ಬೀಳುವ ಅಪಾಯದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

A giant 540-foot asteroid is speeding at 77,282 km/h towards Earth – close  approach on 26 March
ಈ ಬಾಹ್ಯಾಕಾಶ ಶಿಲೆಗೆ 2014 TN17 ಎಂಬ ಹೆಸರಿಡಲಾಗಿದ್ದು, ಭೂಮಿಯತ್ತ ಗಂಟೆಗೆ 77282 ಕಿ.ಮೀ. ವೇಗದಲ್ಲಿ ಭೂಮಿಯತ್ತ ಬರುತ್ತಿದೆ. ಈ ಕ್ಷುದ್ರಗ್ರಹವು ಮುಂದಿನ ದಿನಗಳಲ್ಲಿ ನಮ್ಮ ಗ್ರಹದ ಬಳಿ ಹಾದು ಹೋಗಲಿದೆ. ಈ ಕ್ಷುದ್ರಗ್ರಹವು ಭೂಮಿಯಿಂದ ಸುರಕ್ಷಿತ ದೂರವನ್ನು ಕಾಯ್ದುಕೊಳ್ಳುತ್ತದೆಯಾದರೂ, ನಾಸಾ ಇದನ್ನು ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ ಎಂದು ತಿಳಿಸಿದೆ.

ಈ ಕ್ಷುದ್ರಗ್ರಹದ ಸುಮಾರು 540 ಅಡಿಗಳಷ್ಟು ಅಗಲವಾಗಿದೆ. ತುಂಬಾ ಅಪಾಯಕಾರಿಯಾಗಿರುವ ಹಿನ್ನೆಲೆ ಈ ಕ್ಷುದ್ರಗ್ರಹವನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಸಾ ವಿಜ್ಞಾನಿಗಳ ಪ್ರಕಾರ, ಅದರ ಗಾತ್ರ ಮತ್ತು ವೇಗವನ್ನು ಗಮನಿಸಿದರೆ ಈ ಶಿಲೆಯು ಗಂಟೆಗೆ 77,282 ಕಿ.ಮೀ. ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ನಾಸಾ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದರ ದೊಡ್ಡ ಗಾತ್ರ ಮತ್ತು ಭೂಮಿಗೆ ಸಾಮೀಪ್ಯ ಇರುವುದರಿಂದ, ಇದನ್ನು ಭವಿಷ್ಯದ ಸಂಭಾವ್ಯ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

Earth lost its magnetic field 540 million years ago. Life began shortly  after - India Today

ಭೂಮಿಯ ಕಕ್ಷೆಯ ಪಥ ಬದಲಾವಣೆ:
ಭೂಮಿಯ ಸಮೀಪ ಹಾದುಹೋಗುವ ವಸ್ತುಗಳನ್ನು ನಾಸಾ ಕೇಂದ್ರವು ಸೂಕ್ಷ್ಮವಾಗಿ ಅಧ್ಯಯನ, ನಿರಂತರ ನಿಗಾ ಇಡುವ ಕೆಲಸ ಮಾಡುತ್ತಿದೆ. ಈ ಬಾಹ್ಯಾಕಾಶಿಲೆಯನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಪ್ರಸ್ತುತ ಯಾವುದೇ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಅಪಾಯವಿಲ್ಲ, ಆದರೆ ಭವಿಷ್ಯದಲ್ಲಿ ಕಕ್ಷೆಯಲ್ಲಾಗುವ ಸಣ್ಣ ಬದಲಾವಣೆ ಕೂಡ ಅಪಾಯವನ್ನುಂಟುಮಾಡಬಹುದು. ಅಂದರೆ ಭೂಮಿ ಸೂರ್ಯನನ್ನು ಪರಿಭ್ರಮಿಸುವ ಕಕ್ಷೆಯ ಪಥ ಬದಲಾವಣೆ ಆಗುವ ಸಾಧ್ಯತೆ ಇದ್ದು, ಇದರಿಂದ ಭೂಮಿಯ ವಾತಾವರಣ ಬದಲಾವಣೆಗೊಂಡು ಜೀವ ಸಂಕುಲಗಳ ಗಂಭೀರ ಪರಿಣಾಮ ಬೀಳಬಹುದು. ಒಂದಾ ಜೀವ ಸಂಕುಲಗಳು ನಾಶವಾಗಬಹುದು ಅಥವಾ ಜೀವಿಗಳ ಡಿಎನ್‌ಎಗಳಲ್ಲಿ ವ್ಯತ್ಯಾಸ ಕಾಣಬಹುದು. ಹಗಲು, ರಾತ್ರಿಯ ಸಮಯಗಳಲ್ಲಿ ವ್ಯತ್ಯಾಸ ಕಾಣಬಹುದು. ಒಂದು ವೇಳೆ ಈ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆದರೆ ಅದರ ಪರಿಣಾಮ ಸುನಾಮಿಗಳು, ಭೂಕಂಪಗಳು ಮತ್ತು ವಾತಾವರಣದ ಬದಲಾವಣೆಗಳಂತ ಘಟನೆಗಳು ನಡೆಯಬಹುದು. ಈ ಕಾರಣಕ್ಕಾಗಿ, ವಿಜ್ಞಾನಿಗಳು ಈ ಆಕಾಶಕಾಯಗಳ ಬಗ್ಗೆ ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಈ ಕ್ಷುದ್ರಗ್ರಹವನ್ನು ಆಕಾಶ ಮಾರ್ಗದಲ್ಲೇ ಉಡಾಯಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

error: Content is protected !!