“ಹಿಂದೂ ಸಮಾಜವನ್ನು ಬಡಿದೆಬ್ಬಿಸಲು ಭಜನಾ ಕಾರ್ಯಕ್ರಮ ಬೇಕು“ -ಡಾ.ವೈ.ಭರತ್ ಶೆಟ್ಟಿ

ಸುರತ್ಕಲ್: ಕರಾವಳಿ ಸೇವಾ ಪ್ರತಿಷ್ಠಾನ ರಿ. ಸುರತ್ಕಲ್ ಇದರ ವತಿಯಿಂದ ದೀಪಾವಳಿ ಸಂಭ್ರಮ-2024 ಕುಣಿತ ಭಜನಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಸುರತ್ಕಲ್ ಕರ್ನಾಟಕ ಸೇವಾ ವೃಂದ ವೇದಿಕೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, “ನಮ್ಮ ಹಿಂದೂ ಸಮಾಜದಲ್ಲಿ ಏನೇ ಮಾಡಿದರೂ ತಪ್ಪು ಅನ್ನುವ ರಾಕ್ಷಸ ಪ್ರವೃತ್ತಿಯ ಜನರಿದ್ದಾರೆ. ಬಹುಷಃ ಇವರನ್ನು ದೇವರೇ ಇಂತಹ ಹೇಳಿಕೆಗಳನ್ನು ಕೊಡಲು ಪ್ರೇರಣೆ ನೀಡಿರಬಹುದು. ಯಾಕೆಂದರೆ ಹಿಂದೂ ಸಮಾಜ ಕೆಲವೊಮ್ಮೆ ಮಲಗುತ್ತದೆ. ಈ ವೇಳೆ ಮಲಗಿರುವ ಹಿಂದೂ ಸಮಾಜವನ್ನು ಎಬ್ಬಿಸಲು ಇಂತಹವರು ಬೇಕು. ಅವರಿಗೆ ಇಂತಹ ಕುಣಿತ ಭಜನೆ ಸ್ಪರ್ಧಾ ಕಾರ್ಯಕ್ರಮ ಮೂಲಕ ಉತ್ತರ ಕೊಡಬೇಕು” ಎಂದರು.
ಅರೆಸ್ಸೆಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಪ್ರಕಾಶ್ ಪಿ.ಎಸ್. ಮಾತನಾಡಿ, “ಭಜನೆ ಎನ್ನುವುದು ಭಕ್ತಿಯನ್ನು ತಿಳಿಸುವ ಮಾರ್ಗ. ದೇವರನ್ನು ಆರಾಧಿಸಲು ಮತ್ತು ಒಲಿಸಲು ಕಲಿಯುಗದಲ್ಲಿ ಭಜನೆ ಎನ್ನುವುದು ಸುಲಭ ದಾರಿಯಾಗಿದೆ. ಪುರಾಣ ಕಾಲದಲ್ಲಿ ಯಜ್ಞ ಯಾಗಗಳಿಂದ ದೇವರನ್ನು ಒಲಿಸಿಕೊಳ್ಳುತ್ತಿದ್ದರು. ಕುಣಿತ ಭಜನೆ ಸ್ಪರ್ಧೆಯನ್ನು ಆಯೋಜನೆ ಮಾಡುವುದು ಒಳ್ಳೆಯ ವಿಚಾರ. ಇದಕ್ಕಾಗಿ ಆಯೋಜಕರಿಗೆ ವಂದನೆಗಳು. ಕೆಲವರು ಕೊಳಕು ಮನೋಸ್ಥಿತಿಯಿಂದ ಕುಣಿತ ಭಜನೆಯನ್ನು ವಿರೋಧಿಸುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ಭಜನೆಯನ್ನು ಬೆಂಬಲಿಸುವ ಹಿಂದೂಗಳು ಇಲ್ಲಿದ್ದಾರೆ“ ಎಂದರು.
ವೇದಿಕೆಯಲ್ಲಿ ವೇದಮೂರ್ತಿ ಶಂಕರನಾರಾಯಣ ಭಟ್, ಬಿಜೆಪಿ ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಸುಮಿತ್ರಾ ಕರಿಯ, ಉದ್ಯಮಿ ಸತೀಶ್ ಮುಂಚೂರು, ಸರಿತಾ ಶಶಿಧರ್, ಸತೀಶ್ ಮಲ್ಪೆ, ವರುಣ್ ಚೌಟ, ಲಕ್ಷ್ಮಿ ಶೇಖರ್ ದೇವಾಡಿಗ, ನಯನ ಕೋಟ್ಯಾನ್, ಶೋಭಾ ರಾಜೇಶ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ರಕ್ಷಿತ್ ಪೂಜಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಣ್ ದೀಪ್ ಕಾಂಚನ್, ಸಂದೀಪ್ ಪಚ್ಚನಾಡಿ, ವಿನೋದ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಭರತ್ ರಾಜ್ ಕೃಷ್ಣಾಪುರ ಅತಿಥಿಗಳನ್ನು ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಸುನಿಲ್ ಮುಕ್ಕ ಧನ್ಯವಾದ ಸಮರ್ಪಿಸಿದರು.

error: Content is protected !!