ಉಡುಪಿ: ಉಡುಪಿ ಕಾಂಗ್ರೆಸ್ ಕಚೇರಿಗೆ ದಲಿತ ಮುಖಂಡರು ಮುತ್ತಿಗೆ ಹಾಕುವುದರ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯರಾದ ದಿನೇಶ್ ಪುತ್ರನ್ ರವರು ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರ ಗಮನಕ್ಕೆ ತಂದ ಕೂಡಲೇ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹಾಗೂ ದಲಿತ ಮುಖಂಡ ಜಯನ್ ರೊಂದಿಗೆ ಮಾತನಾಡಿ ಅವರ ಮನವೊಲಿಸಿ ಪ್ರತಿಭಟನೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದಲಿತ ಮುಖಂಡರ ಅನಿಸಿಕೆಗಳನ್ನು ಗೃಹ ಸಚಿವರ ಗಮನಕ್ಕೆ ತರುತ್ತೇನೆ ಎಂಬ ಆಶ್ವಾಸನೆ ಪ್ರಕಾರ ಶಾಸಕರು ಗೃಹಸಚಿವರನ್ನು ಭೇಟಿ ಮಾಡಿ ಅಲ್ಲಿನ ವಿದ್ಯಮಾನಗಳ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದರು. ಕೂಡಲೇ ಗೃಹಸಚಿವರು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಜೊತೆ ದೂರವಾಣಿ ಮೂಲಕ ವಿವರಗಳನ್ನು ಪಡೆದಿರುತ್ತಾರೆ. ಮಂಜುನಾಥ ಭಂಡಾರಿ ಅವರು ಎಸ್ ಸಿ ಘಟಕದ ನಾಯಕಾರಾದ ಗಣೇಶ್ ನೇರ್ಗಿ ಯವರೊಂದಿಗೆ ಮಾತನಾಡಿ ತಮ್ಮ ದಲಿತ ಮುಖಂಡರುಗಳನ್ನು ಪೊಲೀಸ್ ವರಿಷ್ಠಾಧಿಕಾರಿಗೆ ತಾವು ಕರೆದುಕೊಂಡು ಹೋಗಿ ಭೇಟಿ ಮಾಡಿಸಬೇಕೆಂದು ತಿಳಿಸಿರುತ್ತಾರೆ. ಮುಂದೆ ಇಂತಹ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅದನ್ನು ಪಕ್ಷದ ಮುಖಂಡರು ಗಮನಕ್ಕೆ ತಂದು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕದಂತೆ ನೋಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ತಿಳಿಸಿರುತ್ತಾರೆ. ಶಾಸಕರ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.