ಸುರತ್ಕಲ್: ಇತಿಹಾಸ ಪ್ರಸಿದ್ಧ ಚೇಳೈರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವ (ಕಂಡೇವುದ ಆಯನ). ಮೇ 14 ಮತ್ತು 15 ರಂದು ಜರಗಲಿದ್ದು, ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಖಂಡಿಗೆ ದೈವಸ್ಥಾನದ ವಠಾರದಲ್ಲಿ ಜರುಗಿತು. ದೈವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ತೋಕೂರುಗುತ್ತು ಉದಯಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು. ಚೇಳೈರು ಭಟ್ರಚಾವಡಿ ನಾಗರಾಜ್ ಭಟ್, ಆಡಳಿತ ಸಮಿತಿಯ ಅಧ್ಯಕ್ಷ ದಯಾನಂದ ಶೆಟ್ಟಿ ಖಂಡಿಗೆಬೀಡು, ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಕರುಣಾಕರ ಶೆಟ್ಟಿ ಫಣಿಯೂರುಗುತ್ತು, ವಕೀಲರಾದ ರವೀಂದ್ರ ರೈ ಮಂಗಳೂರು, ಅಶೋಕ್ ಶೆಟ್ಟಿ ಮಂಗಳೂರು, ಶೇಖರ ಶೆಟ್ಟಿ ಖಂಡಿಗೆಬೀಡು, ಆಡಳಿತ ಸಮಿತಿಯ ಕಾರ್ಯ ದರ್ಶಿ ಚರಣ್ ಕುಮಾರ್, ಕೋಶಾಧಿಕಾರಿ ಸುಧಾಕರ ಶೆಟ್ಟಿ , ದಿವಾಕರ ಸಾಮಾನಿ ಚೇಳೈರು ಗುತ್ತು, ಉದಯಕುಮಾರ್ ಶೆಟ್ಟಿ ಪಡುಬಾಳಿಕೆ, ಪುಷ್ಷರಾಜ್ ಶೆಟ್ಟಿ ಮಧ್ಯ, ರಮೇಶ್ ಶೆಟ್ಟಿ ಚೇಳೈರು, ಸುರೇಂದ್ರ ಶೆಟ್ಟಿ ಕೊಡಿಪಾಡಿ, ವಾಸುದೇವಾ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.