ಸುರತ್ಕಲ್: ಧರ್ಮ ಮಾರ್ಗದಲ್ಲಿ ಮುನ್ನಡೆದರೆ ದೈವವು ಎಲ್ಲವನ್ನು ಮಾಡಿಸುತ್ತಾನೆ ಅವನ ಸೇವೆಯಿಂದ ಒಳ್ಳೆಯದಾಗುವುದು ಮಾತ್ರವಲ್ಲ ನೆಮ್ಮದಿಯೂ ಸಿಗುತ್ತದೆ ಎಂದು ಎಂ,ಅರ್,ಪಿ,ಎಲ್ ಸಂಸ್ಥೆಯ ಸಿ.ಎಸ್.ಅರ್ ವಿಭಾಗದ ಸಿ.ಜಿ.ಎಂ ಮನೋಜ್ ಕುಮಾರ್ ನುಡಿದರು ಅವರು ಚೇಳೈರು ಕಾಲನಿ ಕಳವಾರ ಪದವು ಕೋರ್ದಬ್ಬು ದೈವಸ್ಥಾನದ ರಾಜಗೋಪುರಕ್ಕೆ ಎಂ,ಅರ್,ಪಿ,ಎಲ್ ಸಂಸ್ಥೆಯಿಂದ ರೂಪಾಯಿ 47 ಲಕ್ಷ ಅನುದಾನ ಮಂಜೂರುಗೊಂಡು ನಿರ್ಮಾಣವಾಗಿದ್ದು ಅದನ್ನು ಉದ್ಘಾಟಿಸಿ ಮಾತನಾಡಿದರು ಎಂ,ಅರ್,ಪಿ,ಎಲ್ ಸಂಸ್ಥೆಯು ಸ್ಥಳೀಯ ಸುತ್ತಲಿನ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಅದ್ಯತೆ ನೀಡಿ ಬಹಳಷ್ಟು ಅನುದಾನ ನೀಡುತ್ತಾ ಬಂದಿದೆ ಮಾತ್ರವಲ್ಲದೆ ಶಿಕ್ಷಣ ಮತ್ತು ನೀರಿನ ಸಮಸ್ಯೆಗಳಿಗೆ ಬಹಳಷ್ಟು ಮಹತ್ವ ನೀಡಿದ್ದೇವೆ ಮುಂದೆಯೂ ನಮ್ಮ ಸಂಸ್ಥೆಯ ಸಹಕಾರವಿದೆ ಎಂದರು ಮುಖ್ಯ ಅತಿಥಿಗಳಾಗಿ ಎಂ,ಅರ್,ಪಿ,ಎಲ್ ಸಂಸ್ಥೆಯ ಮೆಂಟೆನೆನ್ಸ್ ವಿಭಾಗದ ಸಿ.ಜಿ,ಎಂ ಕಿರಣ್,ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ,ಎಂ,ಅರ್,ಪಿ,ಎಲ್ ಸಂಸ್ಥೆಯ ,ಯತೀಶ್ ಕಜ್ಜೊಡಿ,ಪುಷ್ಷರಾಜ್ ಅಡಪ,ಮಹಾಬಲ ಭಂಡಾರಿ,ಕಿಶೋರ್ ಶೆಟ್ಟಿ, ಇಂಜಿನಿಯರ್ ಲಕ್ಷ್ಮಣ ಪೂಜಾರಿ,ಕೋರ್ದಬ್ಬು ದೈವಸ್ಥಾನದ ಅಡಳಿತ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಬಂಗೇರ,ಗುರಿಕಾರರಾದ ಸದಾಶಿವ,ಗುತ್ತಿಗೆದಾರ ಮುತ್ತಯ್ಯ, ಚೇಳೈರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಖಾ,ಸದಸ್ಯೆ ಸುಕುಮಾರಿ ,ಮಾಜಿ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ ಮಧ್ಯ ಮುಂತಾದವರು ಉಪಸ್ಥಿತರಿದ್ದರು ಆಡಳಿತ ಸಮಿತಿ ಅಧ್ಯಕ್ಷ ಬಾಳ ಗಂಗಾಧರ ಪೂಜಾರಿ ಚೇಳೈರು ಕಾಲನಿ ಸ್ವಾಗತಿಸಿ ಪ್ರಧಾನ ಕಾರ್ಯ ದರ್ಶಿ ದಯಾನಂದ ಸುವರ್ಣ ಕಾರ್ಯ ಕ್ರಮ ನಿರೂಪಿಸಿ ಗೌರವಾಧ್ಯಕ್ಷ ರಾಮ ಎಸ್ ಬಂಗೇರ ಧನ್ಯವಾದ ಸಮರ್ಪಿಸಿದರು ಸಂದರ್ಭದಲ್ಲಿ ದೈವಸ್ಥಾನದ ಸುದೀರ್ಘ ಸೇವೆ ಸಲ್ಲಿಸಿದ ಬಾಬು ಮತ್ತು ಶ್ರೀಧರ ಅವರನ್ನು ಸನ್ಮಾನಿಸಲಾಯಿತು.