ಎ.21ರಿಂದ ಮಧ್ಯ ಶ್ರೀ ಖಡ್ಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ನಾಟಕ ಪ್ರದರ್ಶನ


ಸುರತ್ಕಲ್: ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಮಹೋತ್ಸವ ಎಪ್ರಿಲ್ 21 ಮತ್ತು 22 ರಂದು ಜರಗಲಿದೆ. 21ರಂದು ಬೆಳಿಗ್ಗೆ ಗಣಹೋಮ, ತೋರಣ ಮುಹೂರ್ತ ಮಧ್ಯಾಹ್ನ ಮಧ್ಯಬೀಡುವಿನಲ್ಲಿ ಚೌತಿ ಹಬ್ಬ ಅನ್ನಸಂತರ್ಪಣೆ ನಡೆಯಲಿದ. ರಾತ್ರಿ 7-00 ಗಂಟೆಗೆ ಚಪ್ಪರ ಮುಹೂರ್ತ ನಂತರ ಸ್ಥಳೀಯ ಅಂಗನವಾಡಿ, ಶಾಲಾ ಮಕ್ಕಳಿಂದ ನೃತ್ಯ ಕಾರ್ಯ ಕ್ರಮ,ಮಹಿಳಾ ಮಂಡಲದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯ ಫ್ರೆಂಡ್ಸ್ ವತಿಯಿಂದ ತುಳು ನಾಟಕ ಕಥೆ ಎಡ್ಡೆಂಡು ನಾಟಕದ ಪ್ರದರ್ಶನ ನಡೆಯಲಿದೆ. 22ರಂದು ಬೆಳಿಗ್ಗೆ ನಾಗಸನ್ನಿದಿಯಲ್ಲಿ ಅಶ್ಲೇಷ ಪೂಜೆ ನವಕಲಶಾಭಿಷೇಕ, ಮಹಾಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 6-00 ಕ್ಕೆ ಗ್ರಾಮ ಸೇವಾ ಸಂಘ ವತಿಯಿಂದ ಯಕ್ಷಗಾನ ಬಯಲಾಟ, ರಾತ್ರಿ10-00 ಕ್ಕೆ ಮಹಾಗಣಪತಿ ದೇವರಿಗೆ ರಂಗಪೂಜೆ,ಕುಮಾರ ಸಿರಿಗಳ ದರ್ಶನ,ಮೂಲಸ್ಥಾನಕ್ಕೆ ಸವಾರಿ ಮಧ್ಯಬೀಡುವಿನಿಂದ ಭಂಡಾರ ಬರುವುದು, ಕೋರ್ದಬ್ಬು ದೈವದ ಬೇಟಿ, ಕಟ್ಟೆಪೂಜೆ, ದೇವರಿಗೆ ರಂಗಪೂಜೆ, ಹೂವಿನ ಪೂಜೆ,ಬಲಿ ಉತ್ಸವ ನಡೆಯಲಿದೆ. 23ರಂದು ಬೆಳಿಗ್ಗೆ 9-00 ಗಂಟೆಗೆ ನಾಗದೇವರಿಗೆ ನಾಗತಂಬಿಲ ಸೇವೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!