ಮೂಲ್ಕಿ: ಇಲ್ಲಿನ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಮೂರನೇ ವರುಷದ ಯಕ್ಷಗಾನ ಯಾನಾರಂಭ-ತಿರುಗಾಟಕ್ಕೆ ಶನಿವಾರ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು. ಮೇಳದ ಸಂಚಾಲಕ ಸತೀಶ್ ಶೆಟ್ಟಿ ಪಟ್ಲ ಮಾತನಾಡಿದರು. ಧಾರ್ಮಿಕ ವಿಧಿ ವಿಧಾನವನ್ನು ಪಾವಂಜೆ ದೇವಳದ ಡಾ.ಯಾಜಿ ನಿರಂಜನ ಭಟ್ ಅವರು ನೆರವೇರಿಸಿಕೊಟ್ಟರು. ತಿರುಗಾಟಕ್ಕೆ ರಂಗಸ್ಥಳದಲ್ಲಿ ಸಮಾಜ ಸೇವಕ ಪ್ರಸಾದ್ ಶೆಟ್ಟಿ ಹಾಗೂ ಮಲ್ಲಿಕಾ ಶೆಟ್ಟಿ ದಂಪತಿಗಳು ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರಕುಮಾರ್ ದಾನಿಗಳನ್ನು ಹಾಗೂ ವಿಶೇಷ ಸೇವಾಕರ್ತರನ್ನು ಗೌರವಿಸಿದರು.
ಕರ್ಣಾಟಕ ರಾಜ್ಯೋತ್ಸವ ಪುರಸ್ಕೃತರಾದ ರಾಜ್‌ಕುಮಾರ್ ಹಾಗೂ ಅಶೋಕ್ ಶೆಟ್ಟಿ ಸರಪಾಡಿ ಅವರನ್ನು ಸನ್ಮಾನಿಸಲಾಯಿತು. ಪ್ರಸಿದ್ಧ ವೈದ್ಯ ಡಾ. ಪದ್ಮನಾಭ ಕಾಮತ್ ಅವರು ಸಂಕಲನಗೊಳಿಸಿದ ಅಕ್ಷಯಕೃಷ್ಣ ಅವರ ಸಂಗ್ರಹಿಸಿದ 41 ಭಾಗವತರು ಹಾಡಿದ ನಾಲ್ಕನ್ನೂರು ಹಾಡುಗಳ ಸಿಡಿ ಯಕ್ಷಕಣರ್ಾನಂದಕರೀ ಅನಾವರಣಗೊಳಿಸಿ ಉಚಿತವಾಗಿ ಹಂಚಲಾಯಿತು.
ಅಶೋಕ್ ಶೆಟ್ಟಿ ಕಲ್ಪವೃಕ್ಷ, ಸಚ್ಚಿದಾನಂದ ಶೆಟ್ಟಿ ಮುಂಬೈ, ಪ್ರೋ. ಎಂ.ಎಲ್.ಸಾಮಗ, ಸಿಎ ದಿವಾಕರರಾವ್, ಯೋಗೀಂದ್ರ ಭಟ್ ಉಳಿ, ಬಹರೈನ್ ತುಳುಕೂಟದ ರಾಜ್‌ಕುಮಾರ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಕೇಶ್ ಪಾವಂಜೆ, ಅಶ್ವಿನ್ ದೇವಾಡಿಗ, ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಹಿಮಕರ್ ಕದಿಕೆ, ಕದ್ರಿ ನವನೀತ್ ಶೆಟ್ಟಿ, ಪುರಷೋತ್ತಮ ಭಂಡಾರಿ ಅಡ್ಯಾರು ಮತ್ತಿತರರು ಇದ್ದರು.
ನಂತರ ಕಲಾವಿದರ ಕೂಡುವಿಕೆಯಲ್ಲಿ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಸ್ವರ್ಣ ಕಿರೀಟದ ಆಕರ್ಷಣೆ
ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಸೇವಾ ರೂಪದಲ್ಲಿ ನೀಡಿದ ಸ್ವರ್ಣ ಕಿರೀಟ ಈ ಬಾರಿಯ ಆಕರ್ಷಣೆಯಾಗಿದೆ. ಪಾವಂಜೆ ಅಣ್ಣಪ್ಪಯ್ಯ ಯುವ ವೇದಿಕೆಯಿಂದ ಉಯ್ಯಾಲೆಯ ಬೆಳ್ಳಿಯ ಪ್ರಭಾವಳಿ, ಬಿರುವೆರ್ ಕುಡ್ಲ ಅವರಿಂದ ಬೆಳ್ಳಿ ಕಿರೀಟ, ಯೋಗೀಂದ್ರ ಭಟ್ ಉಳಿ ಅವರಿಂದ ಬೆಳ್ಳಿಯ ಶಂಖ, ರಾಮ್ಪ್ರಸಾದ್ರಿಂದ ಬೆಳ್ಳಿಯ ಬಿಲ್ಲು ಬಾಣ, ಶರತ್ ಕಾರ್ನಡುರಿಂದ ಆರು ಆಯುಧಗಳು ಸೇವಾ ರೂಪದಲ್ಲಿ ನೀಡಲಾಯಿತು. ಪ್ರಸ್ತುತ ತಿರುಗಾಟದಲ್ಲಿ ಪ್ರೋ. ಪವನ್ಕಿರಣ್ಕೆರೆ ರಚಿಸಿರುವ ನಾಗ ಸಂಜೀವನ ನೂತನ ಪ್ರಸಂಗ ಪ್ರದರ್ಶನಗೊಳ್ಳಲಿದೆ. 180ಕ್ಕೂ ಹೆಚ್ಚು ಯಕ್ಷಗಾನಗಳು ಬುಕ್ಕಿಂಗ್ ಆಗಿದೆ.