ಹಳೆಯಂಗಡಿ: ಇತಿಹಾಸ ಪ್ರಸಿದ್ಧ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ ತಿಂಗಳ 28,29ರಂದು ನಡೆಯುವ ಸುಬ್ರಹ್ಮಣ್ಯ ಷಷ್ಠಿ ಉತ್ಸವದ ಪೂರ್ವಭಾವಿಯಾಗಿ ದೇವಸ್ಥಾನದ ಸಭಾಭವನದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರ ಸಭೆಯು ನಿನ್ನೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತಸರ ಹರಿದಾಸ್ ಭಟ್ ಅವರು, “ಸದ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಈ ಬಾರಿ ಷಷ್ಠಿ ಉತ್ಸವವನ್ನು ಸಾಂಕೇತಿಕವಾಗಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ದೇವರ ಬಲಿ ಉತ್ಸವ, ಅನ್ನ ಸಂತರ್ಪಣೆ ಮಾತ್ರ ನಡೆಯಲಿದ್ದು ರಥೋತ್ಸವ ಇರುವುದಿಲ್ಲ. ಭಕ್ತರು ಸಹಕಾರ ನೀಡಿ ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸಬೇಕು” ಎಂದರು.
ಪ್ರಧಾನ ಅರ್ಚಕ ಮಧುಸೂದನ್ ಆಚಾರ್, ಜೀರ್ಣೋದ್ಧಾರ ಸಮಿತಿಯ ಮೋಹನದಾಸ, ರತ್ನಾಕರ ಗುರಿಕಾರ, ವಿನೋದ್ ಸಾಲ್ಯಾನ್, ಭಾಸ್ಕರ್ ಅಮೀನ್
ತೋಕೂರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಜಯಕುಮಾರ್ ರೈ, ಪುರುಷೋತ್ತಮ ರಾವ್, ಲೋಕಯ್ಯ ಸಾಲ್ಯಾನ್, ಯೋಗೀಶ್ ಕೋಟ್ಯಾನ್, ವಿಶ್ವನಾಥ್, ವಿಪುಲ ಡಿ ಶೆಟ್ಟಿಗಾರ್, ಗ್ರಾಮಸ್ಥರು ಉಪಸ್ಥಿತರಿದ್ದರು