ಮಸಾಜ್‌ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ!

ಬೆಂಗಳೂರು: ನಗರದ ಖಾಸಗಿ ಹೋಟೆಲ್‌ನ ಸ್ಪಾ ಕೇಂದ್ರದಲ್ಲಿ ಮಸಾಜ್ ಸೇವೆ ಪಡೆಯುತ್ತಿದ್ದ ಕೆನಡಾದ ಮಹಿಳಾ ಪ್ರವಾಸಿಯೊಬ್ಬರಿಗೆ ಥೆರಪಿಸ್ಟ್‌ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಮಹಿಳೆ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಥೆರಪಿಸ್ಟ್ ಅನುಚಿತವಾಗಿ ವರ್ತಿಸಿದ್ದರಲ್ಲದೆ, ತನ್ನ ದೂರನ್ನು ಗಂಭೀರವಾಗಿ ಪರಿಗಣಿಸದ ಹೋಟೆಲ್ ಆಡಳಿತದ ವಿರುದ್ಧವೂ ಆಕೆ ದೂರಿನಲ್ಲಿ ಆರೋಸಿದ್ದಾರೆ.

ವಿಧಾನಸೌಧ ಠಾಣೆ ವ್ಯಾಪ್ತಿಯ ಖಾಸಗಿ ಹೋಟೆಲ್‌ನಲ್ಲಿರುವ ಸ್ಪಾ ಕೇಂದ್ರದಲ್ಲಿ ಕೆನಡಾ ಮೂಲದ ಮಹಿಳೆ ಥೆರಪಿಸ್ಟ್‌ವೊಬ್ಬನಿಂದ ಮಸಾಜ್‌ ಸೇವೆ ಪಡೆಯುತ್ತಿದ್ದರು. ಈ ವೇಳೆ ಥೆರಪಿಸ್ಟ್ ಅನುಚಿತ ರೀತಿಯಲ್ಲಿ ವರ್ತಿಸಿದ್ದು, ತಾನು ಅರೆ ನಗ್ನ ಸ್ಥಿತಿಯಲ್ಲಿದ್ದಾಗ ಅವನು ಕೋಣೆಯ ಬಾಗಿಲನ್ನು ತೆರೆದು, ಅನುಚಿತವಾಗಿ ವರ್ತಿಸಿದ್ದಾನೆ ಎಂದು ಕೆನಡಾದ ಮಹಿಳೆ ಆರೋಪಿಸಿದ್ದಾಳೆ. ಈ ಘಟನೆಯಿಂದ ತನಗೆ ಮಾನಸಿಕ ಆಘಾತ ಮತ್ತು ಅವಮಾನ ಉಂಟಾಗಿದೆ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಜತೆಗೆ ಘಟನೆ ನಡೆದ ತಕ್ಷಣ ತಾನು ಹೋಟೆಲ್ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಆದರೆ, ಆಡಳಿತವು ತನ್ನ ದೂರನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆಕೆ ಆರೋಪಿಸಿದ್ದಾಳೆ.

error: Content is protected !!