
ಮಂಗಳೂರು: ಭಾರತೀಯ ಐಸ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಡೆಹ್ರಾಡೂನ್‌ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಡ್ಯಾಶಿಯಲ್ ಕೋನ್ಸೆಸ್ಸೊ ವಿಶಿಷ್ಟ ಸಾಧನೆ ಮೆರೆದಿದ್ದಾರೆ.ಹಿರಿಯರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಡ್ಯಾಶಿಯಲ್ ಅವರು ಮಿಕ್ಸ್ಡ್ ರಿಲೇ ವಿಭಾಗದಲ್ಲಿ 1 ಚಿನ್ನ ಮತ್ತು 500 ಮೀ.1000 ಮೀ. ಮತ್ತು 1500 ಮೀಟರ್ ನಲ್ಲಿ 3 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.

ಡ್ಯಾಶಿಯಲ್ ಕಾನ್ಸೆಸ್ಸೊ ಪ್ರಸ್ತುತ ಮಂಗಳೂರಿನ ಎಸ್‌ಡಿಎಂ ಸಂಸ್ಥೆಯಲ್ಲಿ ಪದವಿ ವ್ಯಾಸಂಗವನ್ನು ಪಡೆಯುತ್ತಿದ್ದಾರೆ. ಇವರು ಮಂಗಳೂರಿನ ದೇರೆಬೈಲ್ ನಿವಾಸಿ ಫ್ರಾನ್ಸಿಸ್ ಮತ್ತು ಡೋರಿಸ್ ಕಾನ್ಸೆಸ್ಸೊ ಅವರ ಪುತ್ರಿಯಾಗಿದ್ದಾರೆ.
