
ಮೂಡಬಿದ್ರೆ: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಪಲ್ಯ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಮುಲ್ಕಿ ಮೂಡಬಿದ್ರೆ ಮಂಡಲದ ವತಿಯಿಂದ ಚೇಳೃರು ಗ್ರಾಮ ಪಂಚಾಯತ್ ಮಟ್ಟದ ಜನಾಂದೋಲನ ಬೃಹತ್ ಪ್ರತಿಭಟನೆ ಹಾಗೂ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಬೃಹತ್ ಪಾದಯಾತ್ರೆಯು ಚೇಳೃರು ಜಂಕ್ಷನ್ ನಿಂದ ಚೇಳೃರು ಗ್ರಾಮ ಪಂಚಾಯತ್ ವರೆಗೆ ನಡೆಯಿತು ಬಳಿಕ ಪಂಚಾಯತ್ ಬಳಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ಈಶ್ವರ್ ಕಟೀಲು ಮಾತನಾಡಿ ರಾಜ್ಯದ ಆಡಳಿತದ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲಗೊಂಡಿದೆ ಸರಕಾರದ ಗ್ಯಾರಂಟಿ ಭಾಗ್ಯಗಳಿಂದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಬೆಲೆ ಏರಿಕೆ ಹಾಗೂ ಲಂಚ ಗುಳಿತನ, ಅವ್ಯವ ಹಾರಗಳಿಂದ ಸರಕಾರ ಮುಳುಗಿಹೋಗಿದ್ದು ಸರಕಾರದ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತಷ್ಟು ಪ್ರತಿಭಟನೆಗಳನ್ನು ನಡೆಸುವ ಮೂಲಕ ಮುಂದಿನ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್, ನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಯಾವುದೇ ಜನಪ್ರತಿನಿಧಿಗಳನ್ನು ಮತದಾರರು ಅಯ್ಕೆ ಮಾಡಬಾರದಾಗಿ ಮತದಾರರಲ್ಲಿ, ಕಾರ್ಯಕರ್ತರಲ್ಲಿ ಮನವಿ ಮಾಡಿದರು ಮೂಲ್ಕಿ ಮೂಡಬಿದ್ರೆ ಮಂಡಲದ ಬಿಜೆಪಿ ಮುಖಂಡ ಸತೀಶ್ ಮರವೂರು ಮಾತನಾಡಿ ಕಾಂಗ್ರೆಸ್ ಸರ್ಕಾರವು ದಿನನಿತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಬಡವರ್ಗದ ಜನರು ಮನೆ ಕಟ್ಟಲು ಬೇಕಾಗುವ ಕಲ್ಲು, ಮರಳು, ಇತರ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡಜನರು ಸೋತು ಹೋಗಿದ್ದಾರೆ ಬಡ ಜನತೆ ಮತ್ತು ಮಧ್ಯಮ ವರ್ಗ ಬದುಕಲು ಕಷ್ಟವಾದ ಪರಿಸ್ಥಿತಿ ಎದುರಾಗಿದೆ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುವ ಮೂಲಕ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಿಜವಾದ ಬಣ್ಣ ಬಯಲು ಮಾಡುತ್ತೇವೆ ಎಂದು ಗುಡುಗಿದರು.

ವೇದಿಕೆಯಲ್ಲಿ ಬಿಜೆಪಿ ಪ್ರಮುಖರಾದ ದಿನೇಶ್ ಕುಕ್ಯಾನ್, ಮನೋಹರ್ ಶೆಟ್ಟಿ ಸೂರಿಂಜೆ ದಿವಾಕರ ಸಾಮಾನಿ ಚೇಳೃರು, ಮನಪಾ ಮಾಜಿ ಸದಸ್ಯೆ ಶ್ವೇತಾ ಪೂಜಾರಿ,,ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ವಜ್ರಾಕ್ಷಿ ಪಿ ಶೆಟ್ಟಿ ಚೇಳೃರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಾನಂದ ಚೇಳೃರು, ಪುಷ್ಪರಾಜ್ ಶೆಟ್ಟಿ ಮಧ್ಯ, ಯಶೋದ ಬಿ, ಮಾಜಿ ಸದಸ್ಯರಾದ ರೇಖಾ, ಸುಕುಮಾರಿ, ಪ್ರೇಮ ಶೆಟ್ಟಿ,ಸುರೇಶ್ ಸಾಲ್ಯಾನ್,ಚೇಳೃರು ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಧ್ಯ ಶಕ್ತಿಕೇಂದ್ರ ಅಧ್ಯಕ್ಷ ಹರೀಶ್ ಭಂಡಾರಿ, ವಿಶ್ವನಾಥ್ ಅಚಾರ್ಯ, ಭುಜಂಗ ಶೆಟ್ಟಿ ಚೇಳೃರು, ರಮೇಶ್ ಪೂಜಾರಿ ಚೇಳೃರು,ಪುರಂಧರ ಪೂಜಾರಿ, ಚಂದ್ರಶೇಖರ್ ಹೆಬ್ಬಾರ್, ಶೋಭಾ ಶೆಟ್ಟಿ ಮಧ್ಯ, ಹರಿಪ್ರಸಾದ್ ಶೆಟ್ಟಿ ಮಧ್ಯ, ಪುಷ್ಪರಾಜ್ ಕುಲಾಲ್ ಮಧ್ಯ, ಪವನ್ ಕುಮಾರ್ ಶೆಟ್ಟಿ ಮಧ್ಯ,ಸೂರಿಂಜೆ ಗ್ರಾಮ ಪಂಚಾಯತ ಮಾಜಿ ಸದಸ್ಯ ದಿವಾಕರ ಶೆಟ್ಟಿ ಕುಲ್ಲಂಗಾಲು, ದಿನೇಶ್ ಕುಲ್ಲಂಗಾಲು,ಭವಾನಿ ಶಂಕರ್ ಮಧ್ಯ, ಭರತ್ ಶೆಟ್ಟಿ ಮಧ್ಯ,ಪ್ರಭಾಕರ ಶೆಟ್ಟಿ ಮಧ್ಯ ಮುಂತಾದವರು ಉಪಸ್ಥಿತರಿದ್ದರು ಪ್ರತಿಭಟನಾಕಾರರು ಮನವಿಯನ್ನು ಚೇಳೃರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯವರಿಗೆ ಸಲ್ಲಿಸಿದರು