ರಾಹುಲ್ ಯುವಸೂತ್ರ: ಪುತ್ತೂರು ಶಾಸಕ ಅಶೋಕ್ ರೈಗೆ ಸಚಿವ ಸ್ಥಾನ ಫಿಕ್ಸ್? ಮಹಾಲಿಂಗೇಶ್ವರನಿಗೆ ವಿಶೇಷ ಪೂಜೆ!

ಮಂಗಳೂರು: ಡಿಕೆಶಿ ಸಂಪುಟದಲ್ಲಿ 50 ವರ್ಷದೊಳಗಿನ ಯುವ ಶಾಸಕರಿಗೆ ಮಣೆ ಹಾಕಲಾಗುತ್ತದೆ ಎಂಬ ಊಹಾಪೋಹಗಳು ಹರಡುತ್ತಿದ್ದಂತೆ, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರಿಂದ ದೇವತಾ ಆರಾಧನೆಯೂ ಆರಂಭವಾಗಿದೆ!

ಶಾಸಕ ಅಶೋಕ್ ಕುಮಾರ್ ರೈಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿ ಹಾಗೂ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಮತ್ತು ವಿಟ್ಲ ಬ್ಲಾಕ್ ಕಾಂಗ್ರೆಸ್‌ನ ಎಸ್‌ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ ಅವರು ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮುನ್ನಡೆಸಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

.

 

ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಯಾರೂ ಸಚಿವರಾಗಿಲ್ಲ. ಮುಂಬರುವ ಮಹತ್ವದ ಚುನಾವಣೆಗಳ ದೃಷ್ಟಿಯಿಂದ ಕರಾವಳಿ ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಹೈಕಮಾಂಡ್ ಇಲ್ಲಿಗೆ ಪ್ರಾತಿನಿಧ್ಯ ನೀಡುವುದು ಅನಿವಾರ್ಯವಾಗಿದೆ. ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಶೋಕ್ ಕುಮಾರ್ ರೈ ಅವರಿಗೆ ಈ ಕರಾವಳಿ ಕೋಟಾದಡಿ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಡಿಕೆಶಿ ತಮ್ಮದೇ ಆದ ಬಲಿಷ್ಠ ಮತ್ತು ಯುವ ತಂಡವನ್ನು ಕಟ್ಟಲು ಮುಂದಾಗಿರುವುದು ರೈ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಹೈಕಮಾಂಡ್ ಜಾರಿಗೆ ತರಲು ಬಯಸಿರುವ ʻಯುವ ಸೂತ್ರ’ ಅಶೋಕ್ ರೈ ಅವರಿಗೆ ವರದಾನವಾಗಬಹುದಾದರೂ, ಅವರ ಹಾದಿ ಅಷ್ಟು ಸುಲಭವಲ್ಲ. ಕರಾವಳಿ ಭಾಗದ ಹಿರಿಯ ನಾಯಕರಾದ ಪ್ರಸ್ತುತ ಸ್ಪೀಕರ್ ಯು.ಟಿ. ಖಾದರ್ ಅವರ ಹೆಸರು ಕೂಡ ಸಚಿವ ಸ್ಥಾನದ ರೇಸ್‌ನಲ್ಲಿದೆ. ಇದರ ಜೊತೆಗೆ, ಅಶೋಕ್ ರೈ ಮತ್ತು ಹೊಸ ಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ, ಜಾತಿ ಸಮೀಕರಣವನ್ನು ಸರಿದೂಗಿಸಲು ಹೈಕಮಾಂಡ್ ದೆಹಲಿ ಮಟ್ಟದಲ್ಲಿ ಸೂಕ್ಷ್ಮ ಲೆಕ್ಕಾಚಾರ ನಡೆಸಬೇಕಾಗುತ್ತದೆ.

error: Content is protected !!