
ಸುರತ್ಕಲ್: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷಿತ ನಗರದ “ಸುಭಾಷಿತ ಪ್ರೈಡ್” ಫ್ಲ್ಯಾಟ್ ನಲ್ಲಿ ವಾಸ್ತವ್ಯವಿದ್ದು ಹುಬ್ಬಳ್ಳಿ ಮೂಲದ ವಿದ್ಯಾರ್ಥಿನಿ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಯುವತಿ ತಲೆಯ ಭಾಗದಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸ್ಥಿತಿ ಚಿಂತಾಜಾನಕವಾಗಿದೆ ಎಂದು ತಿಳಿದುಬಂದಿದೆ.
ಯುವತಿ ಮುಕ್ಕದ ಶ್ರೀನಿವಾಸ್ ಕಾಲೇಜಿನಲ್ಲಿ ಓದುತ್ತಿದ್ದು ಈ ಹಿನ್ನೆಲೆಯಲ್ಲಿ ಪೋಷಕರು ಸುಭಾಷಿತ ಪ್ರೈಡ್ ಎರಡನೇ ಮಹಡಿಯಲ್ಲಿ ಬಾಡಿಗೆಯಲ್ಲಿ ಉಳಿದಿದ್ದರು. ಇಂದು ಮಧ್ಯಾಹ್ನ ಕಟೀಲು ದೇವಸ್ಥಾನಕ್ಕೆ ಹೆತ್ತವರ ಜೊತೆ ಹೋಗಿದ್ದ ವಿದ್ಯಾರ್ಥಿನಿ ವಾಪಾಸ್ ಆಗಿದ್ದು ಕೂಡಲೇ ಮೂರನೇ ಮಹಡಿಗೆ ಹೋಗಿ ಕೆಳಕ್ಕೆ ಹಾರಿದ್ದಾಳೆ ಎನ್ನಲಾಗಿದೆ.

ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
