ದಳಪತಿ ‘ಮಾಸ್ಟರ್‌ ಪ್ಲಾನ್’: ದ್ರಾವಿಡ ದೈತ್ಯರ ರಹಸ್ಯ ಮದುವೆ ಮುಹೂರ್ತ ಕ್ಯಾನ್ಸಲ್ ಮಾಡಿದ ವಿಜಯ್!

ಚೆನ್ನೈ: ತಮಿಳುನಾಡು ವಿಧಾನಸಭೆ ರಿಸಲ್ಟ್ ಬಂದು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಕುಳಿತಿದ್ದೇನೋ ಹೌದು, ಆದರೆ ಕೋಟೆಯ ಒಳಗಿನ ಕಥೆಯೇ ಬೇರೆ ಇದೆ! ಮ್ಯಾಜಿಕ್ ನಂಬರ್‌ಗಿಂತ ಕೇವಲ 2 ಅಡಿ ಮುಂದಿರುವ ವಿಜಯ್ ಸರ್ಕಾರದಲ್ಲಿ ಈಗ ‘ಸಂಪುಟ ವಿಸ್ತರಣೆ’ ಹೆಸರಲ್ಲಿ ಒಳಗೊಳಗೇ ದೊಡ್ಡ ತಂತ್ರಗಾರಿಕೆ ನಡೆಯುತ್ತಿದೆ. ಯಾರು ಯಾರಿಗೆ ಕೈಕೊಡ್ತಾರೆ? ಯಾರು ಯಾರಿಗೆ ಗಾಳ ಹಾಕ್ತಿದ್ದಾರೆ? ಇಲ್ಲಿದೆ ಇಂಟರೆಸ್ಟಿಂಗ್ ಇನ್‌ಸೈಡ್ ಸ್ಟೋರಿ!

ರಾಜಕೀಯ ವರ್ತುಲದಲ್ಲಿ ಕೇಳಿಬರುತ್ತಿರುವ ಅತ್ಯಂತ ಶಾಕಿಂಗ್ ಗಾಸಿಪ್ ಎಂದರೆ, ಚುನಾವಣೆ ಮುಗಿದ ತಕ್ಷಣ ವಿಜಯ್ ಮುಖಕ್ಕೆ ಮಣ್ಣು ಬಳಿಯಲು ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ದ್ರಾವಿಡ ದೈತ್ಯರು ಒಳಗೊಳಗೇ ‘ಗುಪ್ತ ಸಂಧಾನ’ ಮಾಡಿಕೊಂಡಿದ್ದರಂತೆ! ಎಐಎಡಿಎಂಕೆ ಮುಖ್ಯಸ್ಥ ಇಪಿಎಸ್ ಸಿಎಂ ಸೀಟಲ್ಲಿ ಕೂರಲು, ಡಿಎಂಕೆ ಹೊರಗಿನಿಂದ ಸಪೋರ್ಟ್ ಮಾಡಲು ರೆಡಿಯಾಗಿತ್ತು ಎನ್ನಲಾಗುತ್ತಿದೆ. ಆದರೆ ಸಿನಿಮಾ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟ ವಿಜಯ್, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಬುಟ್ಟಿಗೆ ಹಾಕಿಕೊಂಡು ದೈತ್ಯರ ಮದುವೆ ಮುಹೂರ್ತವನ್ನೇ ಕ್ಯಾನ್ಸಲ್ ಮಾಡಿಬಿಟ್ಟರು!

ಈಗ ಸದ್ಯಕ್ಕೆ ಸಿಎಂ ವಿಜಯ್ ಬೆನ್ನಿಗೆ ನಿಂತಿರುವ ಕಮ್ಯುನಿಸ್ಟ್ (ಸಿಪಿಐ-ಎಂ) ನಾಯಕರು ಹೊಸ ಕ್ಯಾತೆ ತೆಗೆದಿದ್ದಾರೆ ಎನ್ನುತ್ತವೆ ಮೂಲಗಳು. ವಿರೋಧ ಪಕ್ಷ ಎಐಎಡಿಎಂಕೆಯಿಂದ ಒಡೆದು ಬಂದಿರುವ ಬಂಡಾಯ ಶಾಸಕರನ್ನು ಏನಾದರೂ ಸರ್ಕಾರಕ್ಕೆ ಸೇರಿಸಿಕೊಂಡರೆ, “ನಾವು ಮೈತ್ರಿಯಿಂದ ಹೊರನಡೆಯುತ್ತೇವೆ” ಎಂದು ಎಡಪಕ್ಷಗಳು ಬೆದರಿಕೆ ಹಾಕುತ್ತಿವೆಯಂತೆ. ಆದರೆ ಟಿವಿಕೆ ನಾಯಕ ಆಧವ್ ಅರ್ಜುನ ಮಾತ್ರ, “ಅದೆಲ್ಲ ಬರಿ ವದಂತಿ, ನಾವು ಯಾರನ್ನೂ ಬಿಡಲ್ಲ, ಎಲ್ಲರಿಗೂ ಮಂತ್ರಿ ಸ್ಥಾನ ಕೊಡ್ತೀವಿ” ಅಂತ ಮೇಲ್ನೋಟಕ್ಕೆ ಹೇಳ್ತಿದ್ದರೂ, ಒಳಗಡೆ ವಿಜಯ್ ಬೇರೆಯದೇ ಲೆಕ್ಕಾಚಾರ ಹಾಕಿದ್ದಾರೆ!

ಎಐಎಡಿಎಂಕೆಯಿಂದ ಸಿ.ವಿ. ಷಣ್ಮುಗಂ ನೇತೃತ್ವದಲ್ಲಿ ಇಪಿಎಸ್‌ಗೆ ಟಾಂಗ್ ಕೊಟ್ಟು ಬಂದಿರುವ 25 ಬಂಡಾಯ ಶಾಸಕರು ಈಗ ವಿಜಯ್ ಕೈಯಲ್ಲಿದ್ದಾರೆ. ಈ 25 ಜನ ಒಳಗಡೆ ಬಂದರೆ, ಎಡಪಕ್ಷಗಳು ಮುನಿಸಿಕೊಂಡು ಆಚೆ ಹೋದರೂ ವಿಜಯ್ ಸರ್ಕಾರಕ್ಕೆ ಒಂದು ರೋಮವೂ ಅಲ್ಲಾಡಲ್ಲ! ಹಾಗಾಗಿಯೇ ವಿಜಯ್ ಅವರು ಎಡಪಕ್ಷಗಳ ಬೆದರಿಕೆಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ಇತ್ತ ಕೇವಲ 5 ಸೀಟುಗಳನ್ನು ಇಟ್ಟುಕೊಂಡು ಸೈಲೆಂಟ್ ಆಗಿ ಆಟ ನೋಡ್ತಿರುವ ಕಾಂಗ್ರೆಸ್ ನಾಯಕರು, “ನಮಗೆ ಈ ಬಾರಿ ಮಂತ್ರಿ ಸ್ಥಾನ ಬೇಕೇ ಬೇಕು” ಎಂದು ಹಠ ಹಿಡಿದು ಕುಳಿತಿದ್ದಾರಂತೆ. ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಶೀಘ್ರದಲ್ಲೇ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್‌ನ ಪ್ರಮುಖರಿಗೆ ವಿಜಯ್ ದೊಡ್ಡ ಖಾತೆಗಳನ್ನು ಗಿಫ್ಟ್ ಆಗಿ ನೀಡಲಿದ್ದಾರೆ ಎಂಬ ಟಾಕ್ ಚೆನ್ನೈ ರಾಜಕೀಯ ಗಲ್ಲಿಗಳಲ್ಲಿ ದಟ್ಟವಾಗಿದೆ.

ಸಿನಿಮಾಗಿಂತಲೂ ರೋಚಕವಾಗಿರುವ ತಮಿಳುನಾಡಿನ ಈ ರಾಜಕೀಯ ಕ್ಲೈಮ್ಯಾಕ್ಸ್‌ನಲ್ಲಿ ಮುಂದಿನ ವಾರ ಯಾರಿಗೆ ಸಚಿವ ಸ್ಥಾನ ಸಿಗುತ್ತೆ, ಯಾರು ಮೈತ್ರಿ ಕಳಚಿಕೊಂಡು ಆಚೆ ಹೋಗ್ತಾರೆ ಅನ್ನೋದು ಸದ್ಯದ ಬಿಗ್ ಸಸ್ಪೆನ್ಸ್!

error: Content is protected !!