ಬಾಲಕಿಗೆ ಕೀಚಕನಾದ ಪೊಲೀಸ್! ಹೊನ್ನಾವರ-ಮಂಕಿ ಠಾಣಾ ಪಿಎಸ್ ಐ ಆರೆಸ್ಟ್!!

ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್ ಗೌಡ ಎಂಬವರನ್ನು ಪೋಕ್ಸೋ ಪ್ರಕರಣದಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಭಿನಂದನ್ ಯಲ್ಲಾಪುರ ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂತ್ರಸ್ತ ಬಾಲಕಿಯು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಪೊಲೀಸರು ಮಂಕಿ ಪಿಎಸ್‌ಐ ಅಭಿನಂದನ್ ಅವರನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆಯ ಬಳಿಕ ಬಂಧಿಸಿದ್ದಾರೆ.

error: Content is protected !!