

ಸುರತ್ಕಲ್: ರಥಬೀದಿಯ ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದ ನಿಯೋಜಿತ ಜೀರ್ಣೋದ್ಧಾರ ಕಾಮಗಾರಿಯ ಅಂಗವಾಗಿ ನೂತನ ಧ್ವಜಸ್ತಂಭ ನಿರ್ಮಾಣದ ಪ್ರಯುಕ್ತ ಮರದ ಮೆರವಣಿಯ ಭವ್ಯ ಶೋಭಾಯಾತ್ರೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕ್ಷೇತ್ರದ ಅರ್ಚಕರು ಪೂಜೆಗೈದು ಪ್ರಾರ್ಥನೆ ಸಲ್ಲಿಸುವ ಮೂಲಕ ಶಾಸಕರು, ವಿವಿಧ ದೇವಸ್ಥಾನ ದೈವಸ್ಥಾನಗಳ ಗಡಿಪ್ರಧಾನರು, ಶ್ರೀಕ್ಷೇತ್ರದ ಗುರಿಕಾರರು, ಐದು ಮಾಗಣೆ ಮುಖ್ಯಸ್ಥರು, ಏಳು ಗ್ರಾಮ, ಐದು ಪಟ್ಣದ ಪ್ರಮುಖರು, ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಹಾಗೂ ಊರಿನ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ಚಾಲನೆ ನೀಡುವುದರೊಂದಿಗೆ ಬಿರುದಾವಳಿಗಳೊಂದಿಗೆ ನೂತನ ಧ್ವಜಸ್ತಂಭದ ಮರದ ಮೆರವಣಿಗೆ ಶ್ರೀ ಕ್ಷೇತ್ರದ ಕಡೆಗೆ ವಿಜ್ರಂಭಣೆಯಿಂದ ಸಾಗಿತು.

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ, ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಧಾರ್ಮಿಕ ಮುಖಂಡರಾದ ಮಹಾಬಲ ಪೂಜಾರಿ ಕಡಂಬೋಡಿ, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ, ಹೊಸಬೆಟ್ಟು ಮೊಗವೀರ ಸಂಘದ ಗಂಗಾಧರ ಗುರಿಕಾರ, ರಾಮಚಂದ್ರ ಕರ್ಕೆರ, ಉಮೇಶ್ ಪೂಜಾರಿ, ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದ ಬಾಬು ಬಂಡ್ರಿಯಾಲ್, ಚರಣ್ ಜೆ. ಶೆಟ್ಟಿ ಕುಳಾಯಿಗುತ್ತು, ಗುಡ್ಡೆಕೊಪ್ಲ ಮೊಗವೀರ ಸಂಘದ ಅಧ್ಯಕ್ಷ ಕೇಶವ ಕುಂದರ್, ಸತ್ಯಜಿತ್ ಸುರತ್ಕಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷ ಸುರೇಶ್ ಕರ್ಕೆರ, ದೊಡ್ಡಕೊಪ್ಲ ಮೊಗವೀರ ಸಂಘದ ಪದಾಧಿಕಾರಿಗಳು, ರಮಾನಾಥ ರೈ ತಡಂಬೈಲ್, ಶೋಭಾ ರಾಜೇಶ್, ರೂಪೇಶ್ ರೈ ತಡಂಬೈಲ್, ಮಹೇಶ್ ಮೂರ್ತಿ , ರಾಜೇಶ್ ಮುಕ್ಕ, ಹೊಸಬೆಟ್ಟು ಮೊಗವೀರ ಸಂಘದ ಅಧ್ಯಕ್ಷರಾದ ಯೋಗೀಶ್ ಆರ್. ಕರ್ಕೆರ, ಜಗಧೀಶ್ ಎನ್. ಕರ್ಕೆರ, ದಿನೇಶ್ ಕಾಂಚನ್, ಚಂದ್ರಹಾಸ ಸುವರ್ಣ, ಶ್ರೀಕ್ಷೇತ್ರದ ಅರ್ಚಕರಾದ ವೆಂಕಟ್ರಮಣ ಮಯ್ಯ ಮತ್ತು ಸಹೋದರರು, ಆನಂದ ಗುರಿಕಾರ, ತುಕಾರಾಂ ಗುರಿಕಾರ ಮಿಜಾರು, ವಿಳಯದವರು, ಆಡಳಿತ ಸಮಿತಿ ಅಧ್ಯಕ್ಷ ಓಂಪ್ರಕಾಶ್ ಡಿ. ಶೆಟ್ಟಿಗಾರ್, ರಾಮ ಶೆಟ್ಟಿಗಾರ್ ಎಕ್ಕಾರು, ಧನಂಜಯ ಶೆಟ್ಟಿಗಾರ, ಗೋವರ್ಧನ ಶೆಟ್ಟಿಗಾರ್, ವೆಂಕಟೇಶ ಶೆಟ್ಟಿಗಾರ್ ಮಂಗಳಪೇಟೆ, ಸಚಿನ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
