
ಚಂಡೀಗಢ: ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಆರು ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ(ಏ.14) ರಾತ್ರಿ 10 ಗಂಟೆ ಸುಮಾರಿಗೆ ಪಂಜಾಬ್‌ನ ಫತೇಘಢ ಸಾಹಿಬ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫತೇಘರ್ ಸಾಹಿಬ್‌ನ ಮೈನ್ ಮಜ್ರಿ ನಿವಾಸಿಗಳಾದ ಭಕ್ತರು ಬೈಸಾಖಿ ಸಂದರ್ಭದಲ್ಲಿ ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್‌ನಿಂದ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದಾಗ, ಪಠಾಣದ ಮೊರಿಂಡಾ-ಚುನ್ನಿ ರಸ್ತೆ ಪ್ರದೇಶದ ಹಿಮ್ಮತ್‌ಪುರ ಬಳಿ ಬಸ್ ಪಲ್ಟಿಯಾದ ಭೀಕರ ಘಟನೆ ಸಂಭವಿಸಿದೆ.
ಪೊಲೀಸರು ಮತ್ತು ಸ್ಥಳೀಯರು ರಕ್ಷಣ ಕಾರ್ಯಕ್ಕೆ ನೆರವಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.