“ಟಾರ್ಗೆಟ್” ಹೆಸರಲ್ಲಿ ಅಂಚೆ ಸಿಬ್ಬಂದಿಯ ಶೋಷಣೆ ವಿರುದ್ಧ ಪ್ರತಿಭಟನೆ“ -ದಯಾನಂದ ಕತ್ತಲ್ ಸಾರ್

ಮಂಗಳೂರು: ಭಾರತೀಯ ಅಂಚೆ ಇಲಾಖೆ 170 ವರ್ಷದ ಸುದೀರ್ಘ ಇತಿಹಾಸ ಹೊಂದಿದ್ದು ಸಮಾಜದ ಕಟ್ಟಕಡೆಯ ಜನರಿಗೂ ಅಂಚೆ ಇಲಾಖೆ ವಿಶ್ವಾಸಾರ್ಹ ಸೇವೆ ನೀಡುವದರೊಂದಿಗೆ ಇಲಾಖೆ ನೌಕರರು ಜನರ ಪ್ರೀತಿ, ವಿಶ್ವಾಸ, ಮೆಚ್ಚುಗೆ ಪಾತ್ರರಾಗಿದ್ದಾರೆ. ಜನರ ಒಡನಾಡಿಯಾಗಿ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಆದರೂ, ಅಂಚೆ ಇಲಾಖೆ ಸೇವಾ ವಲಯದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದು, ಇದೀಗ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಇದನ್ನು ಒಂದು ಲಾಭದಾಯಕ ಉದ್ಯಮವನ್ನಾಗಿ ಮಾಡುವ ಸಲುವಾಗಿ, ಇಲಾಖೆ ಸಿಬ್ಬಂದಿ ಮೇಲೆ ಪ್ರತಿ ನಿತ್ಯ ಮಾನಸಿಕ ಒತ್ತಡದ ಹೇರಿ, ಸಿಬ್ಬಂದಿ ಸ್ವಂತ ಹಣದಲ್ಲಿ ವಿವಿಧ ಖಾತೆ ತೆರೆಯುವಂತೆ ದುಂಬಾಲು ಬೀಳುತ್ತಿರುವದು ಹಾಗೂ ವಿದೇಶಿ ಕಂಪನಿ ಮೆಕ್ಕಿನ್ನೆ (McKinsey) ಸಲಹೆ ಮೇರೆಗೆ ನಡೆಯುತ್ತಿರುವ ಖಾಸಗೀಕರಣದ ವಿರುದ್ಧ ಭಾರತೀಯ ಅಂಚೆ ನೌಕರರ ಒಕ್ಕೂಟವು ರಾಷ್ಟ್ರದೆಲ್ಲೆಡೆ ಮುಷ್ಕರ ಘೋಷಿಸಿದೆ. ಅಂಚೆ ಇಲಾಖೆಯ ಬಂಡವಾಳ ಶಾಹಿ ನೀತಿಯಿಂದ ಪ್ರತಿ ಹಂತದ ನೌಕರರಿಗೆ ಕಿರುಕುಳದಿಂದಾಗಿ ರೋಸಿ ಹೋಗಿದ್ದಾರೆ. ಹಾಗಾಗಿ ದೇಶದ ಭಾರತೀಯ ಅಂಚೆ ನೌಕರರ ಒಕ್ಕೂಟವು ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದೆ ಎಂದು ದಯಾನಂದ ಕತ್ತಲ್ ಸಾರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಅಂಚೆ ಇಲಾಖೆ ಯಲ್ಲಿ ಸಿಬ್ಬಂದಿಯ ಮೇಲೆ ಗುರಿ ಸಾಧನೆ (Target Achievement) ಹೆಸರಿನಲ್ಲಿ ಒತ್ತಡ ಹೇರಿ ತಮ್ಮ ಸ್ವಂತ ಹಣದಿಂದ ಖಾತೆ ತೆರೆಯುವಂತೆ ಮಾಡುತ್ತಿರುವ ಕ್ರಮವನ್ನು ನಿಲ್ಲಿಸಲು ಹಾಗೂ ವಿದೇಶಿ ಕಂಪನಿ ಮೆಕಿನ್ಸಿ (McKinsey) ಸಲಹೆಯ ಮೇರೆಗೆ ನಡೆಯುತ್ತಿರುವ ಖಾಸಗೀಕರಣದ ವಿರುದ್ಧ ಭಾರತೀಯ ಅಂಚೆ ನೌಕರರ ಒಕ್ಕೂಟವು ರಾಷ್ಟ್ರವ್ಯಾಪಿ ಹೋರಾಟವನ್ನು ಘೋಷಿಸಿದೆ.

20ರಿಂದ 27 ಜುಲೈ 2026: ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ.
28 ಜುಲೈ 2026: ಮಧ್ಯಾಹ್ನದ ಊಟದ ವಿರಾಮದ ವೇಳೆ ವಿಭಾಗೀಯ ಕಚೇರಿಗಳ ಮುಂದೆ ಪ್ರತಿಭಟನೆ.
05 ಆಗಸ್ಟ್ 2026: ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ.
18 ಆಗಸ್ಟ್ 2026: ಅನಿರ್ದಿಷ್ಟಾವಧಿ ಮುಷ್ಕರ.

ಪ್ರಮುಖ ಬೇಡಿಕೆಗಳು

1. ಟಾರ್ಗೆಟ್ ಹೆಸರಿನಲ್ಲಿ ಇಲಾಖಾ ಸಿಬ್ಬಂದಿ ಹಾಗೂ GDS ಸಿಬ್ಬಂದಿಯ ಶೋಷಣೆಯನ್ನು ಹಾಗೂ ಸಿಬ್ಬಂದಿಯಿಂದ ಸ್ವಂತ ಹಣದಲ್ಲಿ ಖಾತೆ ತೆರೆಯುವ ಒತ್ತಡವನ್ನು ತಕ್ಷಣ ನಿಲ್ಲಿಸಬೇಕು. ನೌಕರರಿಗೆ ಪ್ರತಿ ತಿಂಗಳು ಅವೈಜ್ಞಾನಿಕ ಗುರಿಗಳನ್ನು ನೀಡಲಾಗುತ್ತಿದ್ದು ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಅವುಗಳನ್ನು ಪೂರೈಸಲು ಒತ್ತಾಯಿಸಲಾಗುತ್ತಿದೆ ಇಂತಹ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು.

2.ಮಾನ್ಯ ಪ್ರಧಾನ ಮಂತ್ರಿಯವರ ಘೋಷಣೆಯ ನಂತರವೂ ಅಂಚೆಗಳನ್ನೂ ರೈಲು ಮೂಲಕ ಕಳುಹಿಸುವ ಬದಲು RTN ಮೂಲಕ ಕಳುಹಿಸಲಾಗುತ್ತಿದೆ. ನಗರದಿಂದ ನಗರಕ್ಕೆ ಸಾಗುವ RTN ಸೇವೆಯನ್ನು ನಿಲ್ಲಿಸಿ, ರೈಲ್ವೆ ಅಂಚೆ ಸೇವೆಯನ್ನು ಪುನಃ ಅರಂಭಿಸಬೇಕು. ಅಂಚೆ ಇಲಾಖೆಯ ಹಣವನ್ನು ಖಾಸಗಿ ಸಂಸ್ತೆ ಗಳಿಗೆ ನಿಡುವ ಬದಲು ಮತ್ತೊಂದು ಸರ್ಕಾರೀ ಇಲಾಖೆಗೆ (ರೈಲ್ವೆ) ನೀಡಬೇಕು.

1. ಮೇಲ್ ಮೋಟಾರ್ ಸರ್ವಿಸ್ ಹಾಗೂ ಸಿವಿಲ್ ವಿಂಗ್‌ನ ಎಲ್ಲಾ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.

4.ಅಂಚೆ ಇಲಾಖೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ತಡೆಯಲು ತಕ್ಷಣದಿಂದ ಜಾರಿಗೆ ಬರುವಂತೆ ಕಠಿಣ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.

5.ಪೋಸ್ಟಲ್ ಅಕೌಂಟ್ಸ್‌ ನ ವಿಕೇಂದ್ರೀಕರಣವನ್ನು ನಿಲ್ಲಿಸಿ, PACO/PARO ವಿಲೀನ ಸೇರಿದಂತೆ ಬಾಕಿ ಇರುವ ಕ್ಯಾಡರ್ ಪುನರ್‌ರಚನೆ ಹಾಗೂ ಬಡ್ತಿ ಸೌಲಭ್ಯಗಳನ್ನು ಜಾರಿಗೊಳಿಸಬೇಕು.

6.ಮಾಜಿ ಸೈನಿಕರಿಂದ ಇಲಾಖೆಗೆ ನೇಮಕಗೊಂಡ ಸಿಬ್ಬಂದಿಯ ವೇತನ ವ್ಯತ್ಯಾಸಗಳನ್ನು ಸರಿಪಡಿಸಬೇಕು.

1. ಅನುಕಂಪ ಆಧಾರಿತ ನೇಮಕಾತಿಗೆ ಇರುವ 5% ಮಿತಿಯನ್ನು ತೆಗೆದು ಹಾಕಿ ಅರ್ಹರಾಗಿರುವ ಎಲ್ಲ ಮೃತ ನೌಕರರ ಅವಲಂಬಿತರನ್ನು ಹುದ್ದೆಗಳಿಗೆ ನೇಮಕ ಮಾಡಬೇಕು.

8.NDC ವ್ಯವಸ್ಥೆಯನ್ನು ರದ್ದುಪಡಿಸಿ, ಹಳೆಯ ವಿತರಣಾ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು..

9.ಸೆಪ್ಟೆಂಬರ್ 17 (ವಿಶ್ವಕರ್ಮ ಜಯಂತಿ) ಯನ್ನು ರಾಷ್ಟ್ರೀಯ ಕಾರ್ಮಿಕ ದಿನ ಎಂದು ಘೋಷಿಸಿ ಅಂಚೆ ಇಲಾಖೆಯಲ್ಲಿ ರಜಾ ದಿನವೆಂದು ಘೋಷಿಸಬೇಕು.

ಪತ್ರಿಕಾ ಘೋಷ್ಠಿಯಲ್ಲಿ ಭಾರತೀಯ ಅಂಚೆ ನೌಕರರ ಸಂಘದ ವಲಯ ಕಾರ್ಯದರ್ಶಿ ವೀರೇಶ್ ಹಾಗೂ ಸಂಘದ ಪದಾಧಿಕಾರಿಗಳಾದ ರವಿ ಚೌದ್ರಿ, ದೇವಪ್ಪ ಜಿ ಮ್ಯಾಗೇರಿ, ಸಂತೋಷ್ ಬೂದಿ, ಪ್ರಕಾಶ್ ಕರಡಿ ಭಾಗವಹಿಸಿದ್ದರು.

error: Content is protected !!