ಮಂಗಳೂರು: ದೋಣಿ ಮಗುಚಿ ಇಬ್ಬರು ನೀರುಪಾಲು, ಓರ್ವನ ಶವ ಪತ್ತೆ

ಮಂಗಳೂರು: ಫಲ್ಗುಣಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ದೋಣಿ ಮಗುಚಿಬಿದ್ದು ಇಬ್ಬರು ನೀರುಪಾಲಾದ ಘಟನೆ ಬುಧವಾರ ಸಂಜೆಯ ವೇಳೆ ಕುಂಜತ್ ‌ಬೈಲಿನಲ್ಲಿ ಬೆಳಕಿಗೆ ಬಂದಿದೆ. ಮೂವರು ಯುವಕರಲ್ಲಿ ಒಬ್ಬಾತ ಅಪಾಯದಿಂದ ಪಾರಾಗಿದ್ದಾನೆ. ಸ್ಥಳೀಯ ನಿವಾಸಿಗಳಾದ ಗಣೇಶ (28) ಹಾಗೂ ರಾಯಲ್ (27) ನೀರುಪಾಲಾದವರು.
ಇವರು ಸಣ್ಣ ದೋಣಿಯಲ್ಲಿ ನದಿಗೆ ತೆರಳಿದ್ದರು. ಆದರೆ ನದಿಯ ಮಧ್ಯದಲ್ಲಿದ್ದಾಗ ದೋಣಿ ಮಗುಚಿ ನೀರಿಗೆ ಬಿದ್ದಿದ್ದು ಈಜಲು ಬಾರದ ಗಣೇಶ್ (28) ಹಾಗೂ ರಾಯಲ್ (24) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನಿತೇಶ್ (29) ಎಂಬವರು ಈಜಿ ದಡ ಸೇರಿದ್ದಾರೆ. ನದಿಯಲ್ಲಿ ಮುಳುಗಿದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಮಧ್ಯಾಹ್ನ ವೇಳೆಗೆ ಪತ್ತೆ ಮಾಡಿದ್ದು ಗಣೇಶ್ ಮೃತದೇಹ ಸಿಕ್ಕಿದೆ. ರಾಯಲ್ ಎಂಬಾತನ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ.

error: Content is protected !!