ಮಂಗಳೂರು: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಸತತವಾಗಿ ಏರಿಕೆ ಕಾಣುತ್ತಿದ್ದು, ಇದೀಗ ಇಂದು ಮತ್ತೆ 200 ರೂ. ಏರಿಕೆಯಾಗಿದೆ.

ಮಂಗಳವಾರ(ಮಾ.31) ಗ್ರಾಂ ಗೆ 185 ರೂ ಹೆಚ್ಚಿದ್ದ ಚಿನ್ನದ ಬೆಲೆ ಇಂದು 200 ರೂ. ಏರಿಕೆಯಾಗಿದೆ. ಎರಡು ದಿನಗಳಲ್ಲಿ ಬಹುತೇಕ 400 ರೂಗಳಷ್ಟು ಹೆಚ್ಚಳವಾಗಿದೆ.


24 ಕ್ಯಾರೆಟ್‌ನ ಅಪರಂಜಿ ಚಿನ್ನದ 10 ಗ್ರಾಂಗೆ 1,51,480 ರೂ. ತಲುಪಿದ್ದು, 1 ಗ್ರಾಂಗೆ 15,148 ರೂ. ತಲುಪಿದೆ. 22 ಕ್ಯಾರೆಟ್‌ನ ಚಿನ್ನ 10 ಗ್ರಾಂಗೆ 1,38,850 ರೂ. ತಲುಪಿದ್ದು, 1 ಗ್ರಾಂಗೆ 13,885 ರೂ. ತಲುಪಿದೆ. ಇನ್ನು 18 ಕ್ಯಾರಟ್‌ನ 1 ಗ್ರಾಂಗೆ 11,361 ರೂ. ತಲುಪಿದೆ.

ಬೆಳ್ಳಿಯ ಬೆಲೆ ಗ್ರಾಂಗೆ 255 ರೂ.ಗೆ ಏರಿಕೆ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 25,500 ರೂಪಾಯಿ ಇದೆ.