ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯ ಬಿಸಿ ಏರುತ್ತಿರುವ ಹೊತ್ತಲ್ಲೇ ಮೋದಿ ಅವರು ಮನೋಹರಿ ಟೀ ಎಸ್ಟೇಟ್‌ನೊಳಗೆ ಎಂಟ್ರಿ ಕೊಟ್ಟಿದ್ದಾರೆ.
ಬಂದವರೇ ಸುಮ್ಮನೆ ಕೈ ಬೀಸಿ ಹೋಗಲಿಲ್ಲ; ಹೆಗಲಿಗೊಂದು ಸಾಂಪ್ರದಾಯಿಕ ಬಾಸ್ಕೆಟ್ ತಗಲಾಕಿಕೊಂಡು, ಅಲ್ಲಿನ ಮಹಿಳಾ ಕಾರ್ಮಿಕರ ಜೊತೆ ನಿಂತು ಚಹಾ ಎಲೆಗಳನ್ನು ಚಿವುಟಲು ಶುರು ಮಾಡಿದ್ದಾರೆ! ದೇಶವನ್ನೇ ಮುನ್ನಡೆಸುವ ಕೈಗಳು ಅಂದು ಚಹಾ ಎಲೆಗಳನ್ನು ಕಿತ್ತು ಬಾಸ್ಕೆಟ್‌ಗೆ ಹಾಕುತ್ತಿದ್ದರೆ, ಅಲ್ಲಿನ ಕಾರ್ಮಿಕ ಮಹಿಳೆಯರ ಮುಖದಲ್ಲಿ ಅಚ್ಚರಿಯ ಜೊತೆಗೆ ಅತೀವ ಸಂಭ್ರಮ ಮಿಂಚುತ್ತಿತ್ತು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆ ಹಸಿರು ಮೈದಾನದಲ್ಲಿ ಕಳೆದ ಮೋದಿ, ಕೇವಲ ಎಲೆ ಕಿತ್ತು ಸುಮ್ಮನಾಗಲಿಲ್ಲ. ಆ ಮಹಿಳೆಯರ ಶಿಕ್ಷಣ, ಆರೋಗ್ಯ ಮತ್ತು ಅವರ ಬದುಕಿನ ಸಂಕಷ್ಟಗಳ ಬಗ್ಗೆಯೂ ಆಪ್ತವಾಗಿ ಮಾತನಾಡಿದ್ದಾರೆ. “ಈ ಕುಟುಂಬಗಳ ಕಠಿಣ ಪರಿಶ್ರಮ ಅಸ್ಸಾಂನ ಘನತೆಯನ್ನು ಹೆಚ್ಚಿಸಿದೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಚಹಾ ಕಾರ್ಮಿಕರ ಮನ ಗೆದ್ದಿದ್ದಾರೆ.
