ಹಯಾತುಲ್ ಇಸ್ಲಾಂ ಬದ್ರಿಯಾ ಮಸೀದಿಯಲ್ಲಿ “ಮಿಹ್ರಜಾನುಲ್ ಬಿದಾಯ” ಮದರಸ ಆರಂಭೋತ್ಸವ ಸಂಭ್ರಮ

ಮಂಗಳೂರು: ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದಲ್ಲಿ “ಮಿಹ್ರಜಾನುಲ್ ಬಿದಾಯ” 2026-27 ನೇ ವರ್ಷದ ಮದರಸ ಆರಂಭೋತ್ಸವ ಕಾರ್ಯಕ್ರಮ ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಸಭಾಂಗಣದಲ್ಲಿ ನೆರವೇರಿತು.

 

ಕಾರ್ಯಕ್ರಮವನ್ನು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಖತೀಬ್ ಸಿರಾಜುದ್ದೀನ್ ಫೈಝಿ ಅಲ್ ಮಅಬರಿ ದುಆ ಮೂಲಕ ಉದ್ಘಾಟಿಸಿದರು. ಈ ವೇಳೆ ಮಸೀದಿ ಸದರ್ ಉಸ್ತಾದ್ ಮುಹಮ್ಮದ್ ಇಖ್ಬಾಲ್ ಮಕ್ದೂಮಿ ಫೈಝಿ ಮದರಸ ವಿದ್ಯಾಭ್ಯಾಸದ ಮಹತ್ವ ಮತ್ತು ಘನತೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಅಧ್ಯಕ್ಷರಾದ ಎ ಪಿ ಇಕ್ಬಾಲ್, ಮುಅಲ್ಲಿಂ ಉಸ್ತಾದ್ ಅಬ್ದುಲ್ ಖಾದರ್ ಸಅದಿ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ ಆರ್, ಪ್ರಧಾನ ಕಾರ್ಯದರ್ಶಿ ಸಾಜುದ್ದೀನ್, ಕೋಶಾಧಿಕಾರಿ ಇಮ್ರಾನ್ ಅಲಿ, ಹಿರಿಯರಾದ ಹಾಜಿ ಹನೀಫ್ ಮೌಲವಿ ಮತ್ತಿತರರು ಉಪಸ್ಥಿತರಿದ್ದರು

error: Content is protected !!