ಫಾಸ್ಟ್ ಟ್ಯಾಗ್ ಇಲ್ಲಾಂದ್ರೆ ನಾಳೆಯಿಂದ ಟೋಲ್ ನಲ್ಲಿ ನೋ ಎಂಟ್ರಿ!!

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್ 1ರಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ಈ ಬಗ್ಗೆ ನೆಲಮಂಗಲ ಟೋಲ್ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಈಗಾಗಲೇ ಸಾರ್ವಜನಿಕ ಪ್ರಕಟಣೆಯ ಫಲಕಗಳನ್ನು ಹಾಕಲಾಗಿದೆ.

ಹೊಸ ನಿಯಮದ ಪ್ರಕಾರ, ಟೋಲ್ ಬೂತ್​​ಗಳಲ್ಲಿ ನಗದು ಪಡೆಯಲಾಗುವುದಿಲ್ಲ. ಸುಗಮ ಪ್ರಯಾಣಕ್ಕಾಗಿ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿ ಮಾಡಬೇಕಿದೆ. ಏಪ್ರಿಲ್ 15 ರಿಂದ ಫಾಸ್ಟಾಗ್ ಸ್ಕ್ಯಾನ್ ಆಗದಿದ್ದರೆ ಸಿಬ್ಬಂದಿ ಮ್ಯಾನುಯಲ್ ಆಗಿ ವಾಹನ ಸಂಖ್ಯೆ ನಮೂದಿಸಿ ಟೋಲ್ ಪಡೆಯುವುದನ್ನು ರದ್ದುಗೊಳಿಸಲಾಗಿದೆ. ಕೇವಲ ಆಟೋಮ್ಯಾಟಿಕ್ ಫಾಸ್ಟ್​ಟ್ಯಾಗ್ ರೀಡರ್ ಮೂಲಕ ಮಾತ್ರ ಪಾವತಿಗೆ ಅವಕಾಶವಿರುತ್ತದೆ. ನೆಲಮಂಗಲ-ಹಾಸನ ಹಾಗೂ ಬೆಂಗಳೂರು-ತುಮಕೂರು-ಪುಣೆ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಹೊಸ ನಿಯಮದ ಬಗ್ಗೆ ದೊಡ್ಡ ಫಲಕಗಳಲ್ಲಿ ಮಾಹಿತಿ ನೀಡಲಾಗಿದೆ.

ಹಾಗಾಗಿ ವಾಹನ ಸವಾರರು ತಮ್ಮ ಫಾಸ್ಟ್​ಟ್ಯಾಗ್ ಸಕ್ರಿಯವಾಗಿದೆಯೇ ಮತ್ತು ಅದರಲ್ಲಿ ಪೂರಕ ಬ್ಯಾಲೆನ್ಸ್ ಇದೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ.

error: Content is protected !!