ಮಂಗಳೂರು: ಮೆಡಿಕಲ್ ವಿದ್ಯಾರ್ಥಿಯೋರ್ವ ಅಪಾರ್ಟ್ಮೆಂಟ್ ಒಂದರ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ.

ಉತ್ತರ ಭಾರತ ಮೂಲದ ಸಾರ್ಥಕ್ ಮೌರ್ಯ(23) ಮೃತ ಯುವಕ.
ಕೆಎಂಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಾರ್ಥಕ್, ಸೋಮವಾರ(ಮಾ.30) ಸಂಜೆ ಅತ್ತಾವರದ ಗೆಳತಿಯೊಬ್ಬಳ ಮನೆಯಿದ್ದ ಅಪಾರ್ಟ್ಮೆಂಟಿಗೆ ಬಂದಿದ್ದು 12ನೇ ಮಹಡಿಗೆ ತೆರಳಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಎತ್ತರದಿಂದ ಬಿದ್ದಿದ್ದರಿಂದ ದೇಹ ಜರ್ಝರಿತವಾಗಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸಾರ್ಥಕ್ ಅತ್ತಾವರದಲ್ಲಿ ಪಿಜಿಯೊಂದರಲ್ಲಿ ವಾಸವಿದ್ದು ಇಂದಿನಿಂದ(ಮಾ.31) ಪರೀಕ್ಷೆ ನಡೆಯಲಿಕ್ಕಿತ್ತು. ಕೃತ್ಯಕ್ಕೆ ಏನು ಕಾರಣ ಎಂದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕಾರಣ ಏನೆಂಬುದನ್ನು ತಿಳಿಯಲು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.