ಅಕ್ಷತಾ ಇನವಳ್ಳಿಗೆ ಮಂಗಳೂರು ವಿವಿಯಿಂದ ಪಿಎಚ್‌ಡಿ ಪದವಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧಕಿ ಅಕ್ಷತಾ ಟಿ. ಇನವಳ್ಳಿ ಅವರು ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಲಭಿಸಿದೆ.

ಸಂಶೋಧನಾ ವಿಷಯ:

ಪ್ರಾಧ್ಯಾಪಕಿ ಡಾ. ಮೋನಿಕಾ ಸದಾನಂದ ಅವರ ಮಾರ್ಗದರ್ಶನದಲ್ಲಿ ಅಕ್ಷತಾ ಅವರು ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಸಂಶೋಧನೆ ನಡೆಸಿದ್ದರು.

ಇವರು ಮಂಡಿಸಿದ ‘ಇವ್ಯಾಲ್ಯುಯೇಶನ್ ಆಫ್ ಬಿಹೇವಿಯರ್, ನ್ಯರೊನಲ್ ಆಂಡ್ ಮೊಲ್ಯಕ್ಯುಲರ್ ಎಫೆಕ್ಟ್ಸ್ ಆಫ್ ಡಯಾಝೆಪಮ್ ಆಂಡ್ ಮೆಂಟನ್ ಯೂಸಿಂಗ್ ಇನ್ ವಿವೊ ಆಂಡ್ ಇನ್-ವಿಟ್ರೋ ಅಪ್ರೋಚಸ್’ (Evaluation of Behavioral, Neuronal and Molecular Effects of Diazepam and Mentone using In-Vivo and In-Vitro Approaches) ಎಂಬ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಮಾನ್ಯತೆ ನೀಡಿದೆ.

ಹಿನ್ನೆಲೆ:

ಡಾ. ಅಕ್ಷತಾ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಟಿ.ಎನ್. ಇನವಳ್ಳಿ ಮತ್ತು ಶ್ರೀಲತಾ ಟಿ. ಇನವಳ್ಳಿ ದಂಪತಿಯ ಪುತ್ರಿ. ಇವರು ಅಬಿನಂದನ್ ಆರ್.ಕೆ. ಅವರ ಪತ್ನಿಯಾಗಿದ್ದಾರೆ.

 

error: Content is protected !!