ಮಂಗಳೂರು: ಸಂಘಟನೆಯಿಂದ ಸಂಘಕ್ಕೆ ಬಲ ಬರುತ್ತದೆ, ಈ ನಿಟ್ಟಿನಲ್ಲಿ ೨೨೩ ಗ್ರಾ.ಪಂ. ಪಿಡಿಒ ಗಳನ್ನು ಒಗ್ಗೂಡಿಸಿಕೊಂಡು ಸಂಘಟನೆ ಬಲಪಡಿಸುವ ಕರ್ತವ್ಯ ನಮ್ಮ ಮೇಲಿದೆ. ಕರ್ತವ್ಯದ ಸಂದರ್ಭ ಆಗುವ ಗೊಂದಲಗಳ ನಿವಾರಣೆ ನಿಟ್ಟಿನಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮಂಗಳೂರು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಹೇಳಿದರು.

ಮಂಗಳೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ೨೦೨೬-೨೯ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕೃತ ಘೋಷಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷರಾಗಿ ಅರುಣ್ ಪ್ರದೀಪ್ ಡಿಸೋಜ, ಉಪಾಧ್ಯಕ್ಷ ವಿಜಯಶಂಕರ್ ಆಳ್ವ ಕನ್ಯಾನ, ಉಪಾಧ್ಯಕ್ಷೆ (ಮಹಿಳಾ ಮೀಸಲು)ಶೈಲಜಾ ಎ. ಪಾಣಾಜೆ, ಕೋಶಾಧಿಕಾರಿ ಗಾಯತ್ರಿ ಪಿ.ಕನ್ಯಾಡಿ,
ರಾಜ್ಯ ಪರಿಷತ್ ಸದಸ್ಯ ವಿಶ್ವನಾಥ ಬಿ.ಕೋಟೆಕಾರ್, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್ ಸಿಂಪಗಿರಿ, ಕ್ರೀಡಾ ಕಾರ್ಯದರ್ಶಿ ಅಶೋಕ್ ಎನ್.ಜಿ., ಸಾಂಸ್ಕೃತಿಕ ಕಾರ್ಯದರ್ಶಿ(ಮಹಿಳಾ ಮೀಸಲು) ಸಂಧ್ಯಾ ಕೋಡಿಕಲ್ ಆಯ್ಕೆಯಾದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿಯಾಗಿ ಶೈಲಜಾ ಅವರನ್ನು ನೇಮಿಸಲಾಯಿತು.
ಚುನಾವಣಾ ಅಧಿಕಾರಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಘೋಷಿಸಿದರು. ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸುವರ್ಣ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭ ರಾಜ್ಯ ಪರಿಷತ್ ಸದಸ್ಯ ವಿಶ್ವನಾಥ ಬಿ.ಕೋಟೆಕಾರ್ ಮಾತನಾಡಿ, ಕೆಲವರಿಗೆ ಸಮಯದ ಅಭಾವದಿಂದ ಸದಸ್ಯತ್ವ ನೋಂದಣಿ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರನ್ನೂ ನೋಂದಾಯಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಕಾರ್ಯದರ್ಶಿ, ಸಿಬಂದಿಗಳನ್ನು ಜೊತೆಯಾಗಿಸಿಕೊಂಡು ಸಂಘದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.
ಅಧ್ಯಕ್ಷ ಅರುಣ್ ಪ್ರದೀಪ್ ಡಿಸೋಜ ಮಾತನಾಡಿ, ಭರ್ತಿ ಹಾಗೂ ಕೌನ್ಸೆಲಿಂಗ್ ವಿಚಾರದಲ್ಲಿ ಕಳೆದ ರಾಜ್ಯ ಮತ್ತು ಜಿಲ್ಲಾ ಸಂಘ ಯಾವುದೇ ಅಮಿಷ ಇಲ್ಲದೆ ಮಾಡಿದೆ. ತಾಲೂಕು ಸಂಘ ರಚನೆ ಬಳಿಕ ಖಾಲಿ ಇರುವ ಸಂಘಟನಾ ಕಾರ್ಯದರ್ಶಿ ಹಾಗೂ ಉಳಿದ ಪದಾಧಿಕಾರಿಗಳ ನೇಮಕ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಚಿತ್ರ: ಪಿಡಿಒ