ಊರಿಗೆ ತೆರಳಲು ವಾಹನಗಳು ಇಲ್ಲಂತ ಬಸ್ಸನ್ನೇ ಲಪಟಾಯಿಸಿದ ಚಾಲಕ!

ಯಾದಗಿರಿ: ಕೆಕೆಆರ್‌ಟಿಸಿ ಬಸ್‌ ನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವನನ್ನು ಕರ್ತವ್ಯ ಲೋಪದಿಂದಾಗಿ ಕೆಲಸದಿಂದ ವಜಾ ಮಾಡಿದ ಬೆನ್ನಲ್ಲೇ ಆತ ಊರಿಗೆ ಹೋಗಲು ಯಾವುದೇ ವಾಹನಗಳು ಇಲ್ಲದಕ್ಕೆ, ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬಸ್ಸನ್ನೇ ಕದ್ದು ಚಲಾಯಿಸಿಕೊಂಡು ಹೋಗಿರುವ ಅಪರೂಪದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಚಾಲಕ ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿರುವ ಬಸ್ಸನ್ನು ಚಾಲಕ ಕದ್ದು ಕೊಂಡೊಯ್ಯುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿರುವ ಬಸ್ಸನ್ನು ಕೆಕೆಆರ್‌ಟಿಸಿಯ ಚಾಲಕ ಕಂ ನಿರ್ವಾಹಕನಾಗಿದ್ದ ಮಹಿಪಾಲರೆಡ್ಡಿ ಬಸ್ ಕಳ್ಳತನ‌ ಮಾಡಿದ್ದಾನೆ. ಈ ಹಿಂದೆ ಕರ್ತವ್ಯ ಲೋಪ ಹಿನ್ನಲೆ ಆತನನ್ನು ವಜಾ ಮಾಡಲಾಗಿತ್ತು.

ಆದರೆ ಮಹಿಪಾಲರೆಡ್ಡಿ ತನ್ನ ಊರಾದ ರಾಚನಳ್ಳಿಗೆ ಹೋಗಲು ಯಾವುದೇ ವಾಹನಗಳು ಇಲ್ಲದಕ್ಕೆ, ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬಸ್ ಚಾಲನೆ ಮಾಡಿಕೊಂಡು ಕದ್ದುಕೊಂಡು ಹೋಗಿದ್ದಾನೆ ಎನ್ನಲಾಗುತ್ತಿದೆ.

ಬಸ್ ಕಳ್ಳತನ ಮಾಡಿ ಊರಿನ ದೇವಸ್ಥಾನ ಮುಂಭಾಗದಲ್ಲಿ ನಿಲ್ಲಿಸಲಾಗಿದೆ. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮಾರದಲ್ಲಿ ಚಾಲಾಕಿ ಚಾಲಕನ ಕೃತ್ಯ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಬಸ್ ಕದ್ದೊಯ್ದ ಈ ಕೃತ್ಯ ಮಾಡಿದ್ದಾನೆ ಎನ್ನಲಾಗುತ್ತಿದೆ.

ಸೈದಾಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ. ಕಳ್ಳತನವಾದ ಬಸ್ಸನ್ನು ಪೊಲೀಸರು ಮರಳಿ ತಂದಿದ್ದಾರೆ.

error: Content is protected !!