
ಮಂಗಳೂರು: ಮಹರ್ಷಿ ವಾಲ್ಮೀಕಿ ಶಾಲೆ ಬಾಳಿಲ 2026/27 ಸಾಲಿನ 3ನೇ ಪೋಷಕರ ಸಭೆ ಶಾಲೆಯಲ್ಲಿ ನಡೆಯಿತು. ಸಭೆಯಲ್ಲಿ ದಾನಿಗಳಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ಟೀ ಶರ್ಟ್ ಅನ್ನು ಸುಮಾರು 150 ಮಕ್ಕಳಿಗೆ ಎಸ್ ಡಿ ಎಂ ಸಿ ಅಧ್ಯಕ್ಷರ ಮುಖಾಂತರ ವಿತರಿಸಲಾಯಿತು ಸಭೆಯಲ್ಲಿ ಮುಖ್ಯ ಗುರುಗಳಾದ ಶಿವಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮವಸ್ತ್ರ ದಾನಿಗಳಾದ ಶಶಾಂಕ್ ಗೌಡ ಶಿವಮೊಗ್ಗ ಮತ್ತು ಇಚ್ಛಿತ್ ಶೆಟ್ಟಿ ಕುಂದಾಪುರ ಇವರಿಗೆ ಶಾಲಾ ಪರವಾಗಿ ಧನ್ಯವಾದಗಳು ಹೇಳಿದರು. ಶಾಲಾ ಮೇಲ್ವಿಚಾರಕರಾದ ವಿಶ್ವನಾಥ್ ರವರು ಮಾತನಾಡಿ ಶಾಲಾ ನಿಯಮ ಮತ್ತು ಶಿಸ್ತಿನ ಬಗ್ಗೆ ವಿವರಿಸಿದರು.

ಎಸ್ ಡಿಎಂಸಿ ಅಧ್ಯಕ್ಷರಾದ ಲಕ್ಷ್ಮಣ್ ಗೌಡ ಮಾತನಾಡಿ
ಮಕ್ಕಳಿಗಾಗಿ ಪೋಷಕರು ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ. ವಿದ್ಯಾರ್ಥಿಗಳು ಈ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬೇಕಾದರೆ ಪೋಷಕರ ಪಾತ್ರ ಬಹುಮುಖ್ಯ ಎಂದು ಅಭಿಪ್ರಾಯ ಪಟ್ಟರು. ಸಭೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷರಾದ ತುಳಸಿ ಸದಸ್ಯರುಗಳಾದ ಶಿಕ್ಷಕ ವೃಂದದವರು ಪೋಷಕರು ವಿದ್ಯಾರ್ಥಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಶಿಕ್ಷಕಿ ಸುಜಾತ ವಂದಿಸಿದರು.

ಸಭೆಯ ನಂತರ ಅಧ್ಯಕ್ಷರ ಮುತುವರ್ಜಿಯಿಂದ ಶಾಲಾ ಆವರಣ ಸ್ವಚ್ಛಗೊಳಿಸಲಾಯಿತು ಮತ್ತು ಪೋಷಕರಿಂದ ಶ್ರಮದಾನ ನಡೆಯಿತು