
ಬೆಂಗಳೂರು: ಅಸ್ಸಾಂ ಚುನಾವಣೆಯ ಜಂಜಾಟದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಭಿನ್ನ ರೀತಿಯಲ್ಲಿ ಬೇರೆ, ಬೇರೆ ವಿಚಾರದ ಚರ್ಚೆ ಏಕೆ? ಎಲ್ಲಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಉತ್ತರಿಸಿದ್ದಾರೆ.

ಸ್ವಲ್ಪ ನಿಧಾನವಾದರೂ ಸಿದ್ದರಾಮಯ್ಯ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಡಿ.ಕೆ.ಸುರೇಶ್ ಅವರ ಹೇಳಿಕೆ ಬಗ್ಗೆ ಬುಧವಾರ(ಫೆ.11) ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಿದ್ದೇನೆ. ನಾವುಗಳು ಏನು ಮಾತನಾಡಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು ಎಂದರು.

ಕಾಲ ಯಾವಾಗ ಬರಲಿದೆ ಎಂದು ಕೇಳಿದಾಗ, ಇದಕ್ಕೂ ಸಮಯ ನೋಡಿ ಹೇಳುತ್ತೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ್ದೀರಿ ಎಂದು ಕೇಳಿದಾಗ, ಕಾಂಗ್ರೆಸ್ ಕಚೇರಿಗೆ ಹೋಗಿ ಬಂದಿದ್ದೇನೆ ಅಷ್ಟೇ… ಇನ್ನು ಅಸ್ಸಾಂ ಚುನಾವಣೆ ಜಂಜಾಟದಲ್ಲಿದ್ದೇನೆ. ವಿಭಿನ್ನ ರೀತಿಯಲ್ಲಿ ಬೇರೆ, ಬೇರೆ ವಿಚಾರ ಚರ್ಚೆ ಯಾಕೆ. ಇದರ ಬಗ್ಗೆ ನಾನು ಮುಂದೆ ಮಾತನಾಡುತ್ತೇನೆ. ಇದಕ್ಕೆ ಸಮಯ ಉತ್ತರ ನೀಡಲಿದೆ ಎಂದರು.