ಯುಪಿಐ ಮೂಲಕ ಇಪಿಎಫ್‌ಒ ಹಣ ಪಡೆಯಲು ಅವಕಾಶ

ಹೊಸದಿಲ್ಲಿ: ಯುಪಿಐ ಮೂಲಕ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಹಣ ಹಿಂಪಡೆಯಲು ಸದಸ್ಯರಿಗೆ ಅವಕಾಶ ನೀಡುವ ಹೊಸ ಇಪಿಎಫ್‌ಒ ಮೊಬೈಲ್‌ ಆ್ಯಪ್‌ ಅನ್ನು ಇಪಿಎಫ್‌ಒ ಶೀಘ್ರದಲ್ಲಿ ಅನಾವರಣ­ಗೊಳಿಸಲಿದೆ.

ನೌಕರರ ಭವಿಷ್ಯನಿಧಿ ಇಪಿಎಫ್‌ಒ ಚಂದಾದಾರರು ಈ ವರ್ಷದ ಎಪ್ರಿಲ್‌ನಲ್ಲಿ ಬಿಡುಗಡೆ ಆಗಲಿರುವ, ಹೊಸದಾಗಿ ವಿನ್ಯಾಸಗೊಳಿಸಲಾದ ಮೊಬೈಲ್‌ ಅಪ್ಲಿಕೇ­ಶನ್‌ ಬಳಸಿ ಯುಪಿಐ ಪಾವತಿ ಗೇಟ್‌ವೇ ಮೂಲಕ ಇಪಿಎಫ್‌ ಹಣವನ್ನು ನೇರ­ವಾಗಿ ತಮ್ಮ ಬ್ಯಾಂಕ್‌ ಖಾತೆಗಳಿಗೆ ಹಿಂಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

ಕಾರ್ಮಿಕ ಸಚಿವಾಲಯವು ಇಪಿ­ಎಫ್‌ನ ಒಂದು ನಿರ್ದಿಷ್ಟ ಭಾಗವನ್ನು ಸ್ಥಗಿತಗೊಳಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ. ಏಕೀಕೃತ ಪಾವತಿ ಇಂಟರ್‌ ಫೇಸ್‌ (ಯುಪಿಐ) ಬಳಸಿ ಅವರ ಬ್ಯಾಂಕ್‌ ಖಾತೆಯ ಮೂಲಕ ಹಿಂಪಡೆ­ಯಲು ದೊಡ್ಡ ಭಾಗ ಲಭ್ಯವಿ­ರುತ್ತದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ನೌಕರರು ತಮ್ಮ ಇಪಿಎಫ್‌ ಖಾತೆಗಳನ್ನು ಬಳಸಲು ಮತ್ತು ಅವರ ಸೇವೆಗಳನ್ನು ಪಡೆಯಲು ಯುನಿ­ವರ್ಸಲ್‌ ಅಕೌಂಟ್‌ ನಂಬರ್‌(ಯುಎಎನ್‌) ಪೋರ್ಟಲ್‌ ಅಥವಾ ಉಮಂಗ್‌ ಆ್ಯಪ್‌ ಬಳಸುತ್ತಿದ್ದಾರೆ.

error: Content is protected !!