ಕಾರವಾರ: ಕಾರವಾರದ ಆ ದಟ್ಟ ಅರಣ್ಯದ ನಡುವೆ ಒಂದು ಕೊಲೆಯಾಗಿತ್ತು. ವಸಂತ್ ನಾಯ್ಕ್ ಅನ್ನೋ ಜೀವ ಮಣ್ಣ ಸೇರಿತ್ತು. ಅರೆ, ಇದೊಂದು ಸಾಧಾರಣ ಕೊಲೆ ಕೇಸು ಅಂದುಕೊಂಡ ಪೊಲೀಸರಿಗೆ ಸಿಕ್ಕಿದ್ದು ಮಾತ್ರ ಒಬ್ಬಳು ‘ನೌಟಂಕಿ’ ರಾಣಿಯ ಕರಾಳ ಹಿಸ್ಟರಿ! ಅವಳ ಹೆಸರು ಸುಚಿತ್ರಾ. ನೋಡೋಕೆ ಬಣ್ಣ ಬಣ್ಣದ ರೀಲ್ಸ್ ಮಾಡೋ ಸೋಗಲಾಡಿ, ಆದರೆ ಇವಳ ಮೊಬೈಲ್ ಇಣುಕಿದ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಈಕೆಯ ಮೊಬೈಲ್‌ನಲ್ಲಿ ಇರೋದು ಕೇವಲ ಕಾಂಟ್ಯಾಕ್ಟ್ ನಂಬರ್‌ಗಳಲ್ಲ, ಅದು ಇಡೀ ಕರ್ನಾಟಕದ ಯುವಕರನ್ನು ಬಲೆಗೆ ಹಾಕಿಕೊಂಡ ‘ಸಂಪರ್ಕ ಕ್ರಾಂತಿ’!
ನೋಡಿ ಸ್ವಾಮಿ, ಮೊದಲು ಇವಳು ಲವ್ ಮ್ಯಾರೇಜ್ ಆಗಿದ್ದು ಬೆಂಗಳೂರಿನ ಹೋಟೆಲ್ ಮ್ಯಾನೇಜರ್ ಮಹೇಶ್‌ನನ್ನು. ಪಾಪ, ಅವನು ಬೆಂಗಳೂರಿನಲ್ಲಿ ಬೆವರು ಸುರಿಸಿ ತಿಂಗಳಿಗೆ ಇಪ್ಪತ್ತು ಸಾವಿರ ಕಳಿಸ್ತಿದ್ದರೆ, ಇತ್ತ ಈಕೆ ಮಾತ್ರ ರೀಲ್ಸ್ ಮಾಡ್ತಾ ಊರಿನ ಹುಡುಗರ ಜೊತೆ ಸಲ್ಲಾಪ ನಡೆಸ್ತಿದ್ದಳು. ಪತಿ ಮಹೇಶನ ಪ್ರೀತಿ, ಹಡೆದ ಇಬ್ಬರು ಹೆಣ್ಣುಮಕ್ಕಳ ಮಮಕಾರ ಈಕೆಗೆ ಬೇಕಿರಲಿಲ್ಲ. ಸುಚಿತ್ರಾಗೆ ಬೇಕಾಗಿದ್ದು ಐಷಾರಾಮಿ ಜೀವನ ಮತ್ತು ಕಾಮದ ಅಮಲು.

ಜ್ಯೋತಿಷಿ ಕಮಲಾಕರ್ ಭಟ್ ಈಕೆಯ ಬಲೆಗೆ ಬಿದ್ದ ಅತಿದೊಡ್ಡ ಮೀನು. ಸುಚಿತ್ರಾಳ ಸ್ನೇಹಕ್ಕೆ ಸೋತ ಜ್ಯೋತಿಷಿ ಅವಳಿಗೆ ಕಾರು ಕೊಡಿಸಿದ, ಬುಲೆಟ್ ಓಡಿಸೋದು ಕಲಿಸಿದ, ಕೊನೆಗೆ ತನ್ನ ಸಂಸಾರ ಬಿಟ್ಟು ಈಕೆಯ ಜೊತೆ ರಾಸಲೀಲೆಯಲ್ಲಿ ಮುಳುಗಿದ. ಇವರಿಬ್ಬರ ಆಡಿಯೋ ಕೇಳಿದ್ರೆ ಸಾಕು, ಎಂಥವರಿಗೂ ಅಸಹ್ಯ ಹುಟ್ಟುತ್ತೆ. ಆ ಜ್ಯೋತಿಷಿಯನ್ನೇ ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿದ್ದ ಈಕೆ, ಅವನಿಂದ ಸೈಟು, ಜಮೀನು ಕೂಡ ಬರೆಸಿಕೊಂಡಿದ್ದಾಳೆ ಅಂದ್ರೆ ಈಕೆಯ ಐನಾತಿ ಬುದ್ಧಿ ಯಾವ ಮಟ್ಟದ್ದು ಅಂತ ನೀವೇ ಊಹಿಸಿ!

ಈಗ ಪೊಲೀಸರು ಈಕೆಯ ಮೊಬೈಲ್ ಚೆಕ್ ಮಾಡ್ತಿದ್ದಾರೆ. ಉತ್ತರ ಕನ್ನಡ, ಶಿವಮೊಗ್ಗ, ಕಲಬುರಗಿ… ಹೀಗೆ ರಾಜ್ಯದ ಉದ್ದಗಲಕ್ಕೂ ಈಕೆಗೆ ‘ಫ್ರೆಂಡ್ಸ್’ ಇದ್ದಾರೆ. ಯಾವ ಕ್ಷಣದಲ್ಲಿ ಪೊಲೀಸರು ಕಾಲ್ ಮಾಡ್ತಾರೋ ಅನ್ನೋ ಭಯಕ್ಕೆ ಅರ್ಧದಷ್ಟು ಹುಡುಗರು ಇನ್‌ಸ್ಟಾ ಅಕೌಂಟ್ ಡಿಲೀಟ್ ಮಾಡಿದ್ರೆ, ಇನ್ನು ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಿ ಹೋಗಿದ್ದಾರೆ. ಈಕೆ ಎಷ್ಟೋ ಜನಕ್ಕೆ ಹಣದ ಆಮಿಷವೊಡ್ಡಿ ಅಥವಾ ಬ್ಲ್ಯಾಕ್‌ಮೇಲ್ ಮಾಡಿ ಮೋಸ ಮಾಡಿರೋ ಅನುಮಾನ ಪೊಲೀಸರಿಗಿದೆ.

ವಸಂತ್ ನಾಯ್ಕ್ ಕೊಲೆ ಕೇಸಿನಲ್ಲಿ ಈಕೆ ಈಗ ಜೈಲು ಕಂಬಿ ಎಣಿಸುತ್ತಿದ್ದಾಳೆ. ಅತ್ತ ಸಿದ್ದಾಪುರ ಠಾಣೆಯ ಇಬ್ಬರು ಪೊಲೀಸರು ಈಕೆಗೆ ಸಾಥ್ ಕೊಟ್ಟಿದ್ದಕ್ಕೆ ಅಮಾನತ್ತಾಗಿದ್ದಾರೆ. ಹೆಂಡತಿಯನ್ನ ಪ್ರೀತಿಸಿ ಮದುವೆಯಾದ ಮಹೇಶ ಇಂದು ಮಗಳ ಮುಂದೆ ತಲೆ ತಗ್ಗಿಸಿ ನಿಂತಿದ್ದಾನೆ.
ರೀಲ್ಸ್ ಮಾಡೋ ಹುಚ್ಚು, ಸಂಸಾರವನ್ನು ಹಾದಿಬೀದಿಗಿಳಿಸಿ ಕೊನೆಗೆ ಕಂಬಿ ಎಣಿಸುವಂತೆ ಮಾಡಿದೆ. ಈ ಸುಚಿತ್ರಾಳ ಕಥೆ ಇದೆಯಲ್ಲ, ಇದು ದಾರಿ ತಪ್ಪಿರೋ ಹತ್ತಾರು ಹೆಣ್ಣುಮಕ್ಕಳಿಗೆ ಒಂದು ‘ಚಾಟಿ ಏಟು’.
