ಕೇಂದ್ರ ಬಜೆಟ್ 2026: ಈ ಬಾರಿಯ ಬಜೆಟ್​ನಲ್ಲಿ ಏನಿರುತ್ತೆ? ಏನಿರಲ್ಲ?

ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ನಡೆದಿದ್ದು, ಬಜೆಟ್ ಅಧಿವೇಶನ ಶುರುವಾಗಿದೆ. ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್​ನಲ್ಲಿ ಜನರು ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಆದಾಯ ತೆರಿಗೆಯಲ್ಲಿ ಕಳೆದ ಬಜೆಟ್​ನಲ್ಲಿ ಗಣನೀಯ ಇಳಿಕೆ ಮಾಡಲಾಗಿದೆ.

ಆದರೆ ಈ ಬಾರಿ ಮಂಡನೆಯಾಗುವ ಬಜೆಟ್​ನಲ್ಲಿ ಏನಿರುತ್ತೆ, ಏನಿರಲ್ಲ, ಯಾರಿಗೆ ಹೆಚ್ಚು ಭಾಗ್ಯ, ಇತ್ಯಾದಿ ನಿರೀಕ್ಷೆ, ಅಪೇಕ್ಷೆಗಳು ಜಾಸ್ತಿ ಇದೆ. ಪ್ರತೀ ಬಜೆಟ್​ನಲ್ಲಿ ಜನಸಾಮಾನ್ಯರು ಅತಿಹೆಚ್ಚು ಗಮನಿಸುವುದು ಆದಾಯ ತೆರಿಗೆ ಅಂಶಗಳನ್ನು. ಈ ಬಾರಿಯ ಬಜೆಟ್​ನಲ್ಲಿ ಇನ್ಕಮ್ ಟ್ಯಾಕ್ಸ್ ವಿಚಾರವನ್ನು ನಿರ್ಮಲಾ ಸೀತಾರಾಮನ್ ತರುತ್ತಾರಾ ಎನ್ನುವಂತಹ ಪ್ರಶ್ನೆಯನ್ನು ಜನರು ಎದುರು ನೋಡುತ್ತಿದ್ದಾರೆ.

ಕಳೆದ ವರ್ಷದ ಬಜೆಟ್​ನಲ್ಲಿ (2025ರದ್ದು) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಕಮ್ ಟ್ಯಾಕ್ಸ್ ವಿಚಾರದಲ್ಲಿ ಭರಪೂರ ಕೊಡುಗೆಗಳನ್ನು ಜನಸಾಮಾನ್ಯರಿಗೆ ಕೊಟ್ಟಿದ್ದರು. ಸ್ಲ್ಯಾಬ್ ದರಗಳು ಬದಲಾದವು, ಸರಳಗೊಂಡವು. 12 ಲಕ್ಷ ರೂ ಆದಾಯ ಇದ್ದವರಿಗೆ ಟ್ಯಾಕ್ಸ್ ಮನ್ನಾ ಮಾಡಲಾಯಿತು. 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಒಳಗೊಂಡರೆ 12,75,000 ರೂ ವಾರ್ಷಿಕ ಆದಾಯ ಇರುವವರು ಇನ್ಕಮ್ ಟ್ಯಾಕ್ಸ್ ಬಾಧ್ಯತೆಯನ್ನೇ ಹೊಂದಿರುವುದಿಲ್ಲ.

ಭಾರತದಲ್ಲಿ ಹೆಚ್ಚಿನ ಆದಾಯ ತೆರಿಗೆ ಪಾವತಿದಾರರ ವಾರ್ಷಿಕ ಆದಾಯ 12.75 ಲಕ್ಷ ರೂ ಮಿತಿಯೊಳಗೆಯೇ ಇದೆ. ಹೀಗಾಗಿ, ಕಳೆದ ಬಾರಿಯ ಬಜೆಟ್​ನಿಂದ ಕೋಟ್ಯಂತರ ಜನರು ಟ್ಯಾಕ್ಸ್ ರಿಲೀಫ್ ಪಡೆದಿದ್ದರು.

ಈ ಬಾರಿಯ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಳೆಯ ಟ್ಯಾಕ್ಸ್ ಸಿಸ್ಟಂ ಅನ್ನು ನಿಲ್ಲಿಸುವ ನಿರ್ಧಾರ ಮಾಡುತ್ತಾರಾ? ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ ಇನ್ನಷ್ಟು ಡಿಡಕ್ಷನ್ ಆಯ್ಕೆಗಳನ್ನು ಕೊಟ್ಟು ಹಳೆಯ ರೆಜಿಮ್ ಅನ್ನು ನಿಲ್ಲಿಸುತ್ತಾರಾ? ಎಂಬ ಕುತೂಹಲವನ್ನು ಜನರಲ್ಲಿ ಸೃಷ್ಟಿಸಿದೆ.

error: Content is protected !!