ಸುರತ್ಕಲ್: ಸೂರಿಂಜೆ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವವು ಎಪ್ರಿಲ್ 2 ರಿಂದ ಎಪ್ರಿಲ್ 8 ರವರೆಗೆ ಜರಗಲಿದ್ದು, ಅದರ ಪ್ರಯುಕ್ತ ಬೊಳ್ಳಾರುಗುತ್ತಿನಲ್ಲಿ ಸ್ವಾಗತ ಸಮಿತಿ ಮತ್ತು ಅತಿಥಿ ಸತ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಸಭೆ ನಡೆಯಿತು.

ಸಭೆಯಲ್ಲಿ ಪಂಚ ದೈವಗಳ ಸಮಿತಿಯ ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ ಮಾಹಿತಿ ನೀಡುತ್ತಾ ಎಪ್ರಿಲ್ 2 ರಂದು ವಿಜೃಂಭಣೆಯ ಶೋಭಾ ಯಾತ್ರೆಯೊಂದಿಗೆ ಹೊರೆಕಾಣಿಕೆ ಬರಲಿದ್ದು, ಎಪ್ರೀಲ್ 3 ರಂದು ಐದು ಗ್ರಾಮಗಳಿಂದ ದೈವಗಳ ಭಂಡಾರ ಆಗಮನ ಎಪ್ರೀಲ್ 4 ತಾರೀಖಿನಿಂದ ಎಪ್ರೀಲ್ 7 ರವರೆಗೆ ನೇಮೋತ್ಸವ ನಡೆಯಲಿದೆ.

ಪ್ರತಿ ದಿನ ರಾತ್ರಿ ಅನ್ನಸಂತರ್ಪಣೆ, ನೇಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರಲ್ಲದೆ ವಿಶೇಷವಾಗಿ ಎಪ್ರೀಲ್ 4 ರಂದು ಧಾರ್ಮಿಕ ಸಭಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾಂತರ ಚಲನಚಿತ್ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಇತರ ಗಣ್ಯರು ಅಗಮಿಸಲಿದ್ದಾರೆ ಎಂದರು.

ವೇದಿಕೆಯಲ್ಲಿ ಉದ್ಯಮಿ ಮೋಹನ್ ದಾಸ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉದ್ಯಮಿ ಸತೀಶ್ ಮುಂಚೂರು, ಸೂರಿಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜೀತೆಂದ್ರ ಶೆಟ್ಟಿ ಶಿಬರೂರು,ರಾಜೇಶ್ ಶೆಟ್ಟಿ ಕೊಡೆತ್ತೂರು, ಚರಣ್ ಶೆಟ್ಟಿ ಕುಳಾಯಿಗುತ್ತು ಮುಂತಾದವರು ಉಪಸ್ಥಿತರಿದ್ದರು.
ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿ ನಿತೇಶ್ ಶೆಟ್ಟಿ ಎಕ್ಕಾರ್ ಧನ್ಯವಾದ ಸಮರ್ಪಿಸಿದರು
