ಕೃಷ್ಣನಗರ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಹೆರಿಗೆ ನಂತರ ಆಸ್ಪತ್ರೆಯಿಂದ ನವಜಾತ ಶಿಶು ಕಾಣೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾದ ಕೃಷ್ಣನಗರ ಸದರ್ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ವೈದ್ಯರು ಆಕೆಯ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಮತ್ತೊಂದೆಡೆ, ಕೊನೆಯ ಅಲ್ಟ್ರಾ-ಸೋನೋಗ್ರಫಿಯಲ್ಲಿ 2 ಕೆಜಿ 400 ಗ್ರಾಂ ತೂಕದ ಮಗು ಇದೆ ಎಂದು ವರದಿಯಾಗಿದೆ ಎಂದು ಆಶಾ ಕಾರ್ಯಕರ್ತೆ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ಲಿಖಿತ ದೂರು ದಾಖಲಿಸಿದ್ದು, ನಬದ್ವೀಪ್‌ನ ಇಪ್ಪತ್ತರ ಹರೆಯದ ಮಂಪಿ ಖಾತುನ್ ಎಂಬ ಗರ್ಭಿಣಿ ಮಹಿಳೆಯನ್ನು ಹೆರಿಗೆಗಾಗಿ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮುಖ್ಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆ ರೋಜಿನಾ ಬೀಬಿ ಶೇಖ್ಮ ಮಾತನಾಡಿ, ಮಹಿಳೆಗೆ ಮೋಸ ಮಾಡಲಾಗಿದೆ. ಅವಳು ಗರ್ಭಿಣಿಯಾಗಿದ್ದಾಗಿನಿಂದ ನಾನು ಅವಳನ್ನು ನೋಡುತ್ತಿದ್ದೇನೆ. ಜನವರಿ 21 ರಂದು ಅವಳಿಗೆ USG ಮಾಡಲಾಗಿತ್ತು ಮತ್ತು ಮಗು ಇತ್ತು ಎಂದರು. ಅವರು ನನ್ನನ್ನು ಮಲಗಿಸಿದ್ದರು, ನಂತರ ಹೆರಿಗೆ ಮಾಡಲಾಗಿದೆ ಎಂದು ನಾನು ಭಾವಿಸಿದ್ದೆ ಆದರೆ, ನನ್ನ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.