ಕಾಪು: ಕಾಂಗ್ರೆಸ್ ಮುಖಂಡ, ಕೆಎಂಎಫ್ ಮಾಜಿ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಶುಭ ಕಾರ್ಯಕ್ಕಾಗಿ ಮುಂಬಯಿಗೆ ತೆರಳಿದ್ದನ್ನು ನೋಡಿಕೊಂಡು, ಗುರುವಾರ(ಜ.29) ಮಧ್ಯರಾತ್ರಿಯ ನಂತರ ಮನೆಯ ಮುಖ್ಯದ್ವಾರದ ದಾರಂದ ಮುರಿದು ಒಳಗೆ ಕಳ್ಳರು ನುಗ್ಗಿ ಮನೆಯನ್ನು ಜಾಲಾಡಿದ್ದಾರೆ.

ಮೇಲಿನ ಮಹಡಿಯಲ್ಲಿ ಓರ್ವ ಮಲಗಿದ್ದು, ಕಳ್ಳತನ ಆದ ವಿಷಯ ಅವರ ಗಮನಕ್ಕೆ ಬಂದಿಲ್ಲ. ಕಳ್ಳರು ಸಿಸಿ ಕ್ಯಾಮೆರಾದ ದಿಕ್ಕನ್ನು ಬದಲಿಸಿ ಡಿವಿಆರ್ ಕೊಂಡೊಯ್ದಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕಳವಾದ ಸೊತ್ತುಗಳ ನಿಖರ ಮಾಹಿತಿ ಲಭ್ಯವಾಗಿಲ್ಲ.
ಡಿವೈಎಸ್ಪಿ ಡಿ.ಟಿ. ಪ್ರಭು, ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಎಸ್ಸೈ ತೇಜಸ್ವಿ, ಬೆರಳಚ್ಚು ವಿಭಾಗದ ಇನ್ಸ್ ಪೆಕ್ಟರ್ ಮೋಹಿನಿ ಕುಮಾರ್ ಸಹಿತ ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.