
ಸುಳ್ಯ: ಜಲ್ಲಿ ತುಂಬಿದ ಲಾರಿ ಶಿಥಿಲಗೊಂಡಿದ್ದ ಕಿರು ಸೇತುವೆ ಮೇಲೆ ಚಲಿಸಿ ತೋಡಿಗೆ ಕುಸಿದು ಬಿದ್ದ ಘಟನೆ ಮಂಡೆಕೋಲು ಗ್ರಾಮದ ಉದ್ದಂತಡ್ಕ ಎಂಬಲ್ಲಿ ಸೋಮವಾರ(ಜ.19) ಸಂಭವಿಸಿದೆ. ಈ ಘಟನೆಯಲ್ಲಿ ಲಾರಿಯ ಚಾಲಕ ಗಾಯಗೊಂಡಿದ್ದಾರೆ.

ಸುಳ್ಯ ಮಂಡೆಕೋಲು ಗ್ರಾಮದ ಪೇರಾಲು – ಉದ್ದಂತಡ್ಕ – ಮೇನಾಲ ಸಂಪರ್ಕಿಸುವ ರಸ್ತೆಯ ಉದ್ದಂತಡ್ಕ ಎಂಬಲ್ಲಿ ಸಣ್ಣ ಸೇತುವೆ ಕಳೆದ ಮಳೆಗಾಲ ಸಂದರ್ಭ ಮಣ್ಣು ಕುಸಿದು ಶಿಥಿಲಗೊಂಡಿತ್ತು. ಇದರಿಂದಾಗಿ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಮಂಡೆಕೋಲು ಗ್ರಾ.ಪಂ. ಕೂಡ ಸೇತುವೆ ಮೇಲೆ ವಾಹನ ಸಂಚಾರ ನಿಷೇಧ ಮಾಡಿ ಫಲಕ ಅಳವಡಿಸಿತ್ತು.

ಸೋಮವಾರ ಸಂಜೆ ಕಾಲು ಸೇತುವೆಯ ಮೇಲೆ ಜಲ್ಲಿ ತುಂಬಿದ ಲಾರಿ ಸಂಚರಿಸಿದ ಪರಿಣಾಮ ಸೇತುವೆ ಕುಸಿದು ಬಿದ್ದಿದೆ. ಲಾರಿ ತೋಡಿಗೆ ಬಿದ್ದ ಪರಿಣಾಮ ಚಾಲಕನಿಗೆ ಗಾಯವಾಗಿದೆ.