“ರಷ್ಯಾ ತೈಲಕ್ಕೆ ಅಮೆರಿಕಾ 30 ದಿನಗಳ ಪರ್ಮಿಷನ್‌ ನೀಡಿದ್ದು ಯಾಕೆ?: ಅಸಲಿ ಸತ್ಯ ಗೊತ್ತಾದರೆ ನೀವು ನಗುತ್ತೀರಾ!

ಮಂಗಳೂರು: ಈ ಜಗತ್ತು ಅಂದುಕೊಂಡಷ್ಟು ಸರಳವಾಗಿಲ್ಲ. ಅದರಲ್ಲೂ ಈ ಅಂತರಾಷ್ಟ್ರೀಯ ರಾಜಕೀಯ ಎನ್ನುವುದು ಪಕ್ಕಾ ಹಳೆ ಕಾಲದ ಹಳ್ಳಿ ಪಂಚಾಯಿತಿಯಂತೆ. ಅಲ್ಲಿ ಒಬ್ಬ ಪಟೇಲ ಇರುತ್ತಾನೆ, ತಾನು ಹೇಳಿದ್ದೇ ವೇದವಾಕ್ಯ ಅಂತ ಅಂದುಕೊಂಡಿರುತ್ತಾನೆ. ಅಮೆರಿಕಾ ಈಗ ಅಂತಹದ್ದೇ ಒಬ್ಬ ಪಟೇಲನ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಅಮೆರಿಕಾ ಅಧಿಕಾರಿಗಳು ಬಾಯಿಬಿಟ್ಟರು, “ನೋಡಿ, ನಾವು ನಮ್ಮ ಗೆಳೆಯ ಭಾರತಕ್ಕೆ ರಷ್ಯಾದಿಂದ ತೈಲ ತಗೊಳ್ಳಲು ಪರ್ಮಿಷನ್ ಕೊಟ್ಟಿದ್ದೇವೆ” ಅಂತ! ಅಬ್ಬಬ್ಬಾ… ಎಷ್ಟು ದೊಡ್ಡ ಉಪಕಾರ!

ಅಸಲಿ ಆಟ ಬೇರೆಯೇ ಇದೆ
ಅಮೆರಿಕಾ ಈಗ ʻಅನುಮತಿ’ ಕೊಟ್ಟಿದ್ದು ಉದಾರತೆಯಿಂದ ಅಲ್ಲ, ಅನಿವಾರ್ಯತೆಯಿಂದ. ಯಾಕೆ ಗೊತ್ತಾ? ಇವತ್ತು ಭಾರತದ ಬಳಿ ಇರೋದು ಮಾಮೂಲಿ ಶಕ್ತಿ ಅಲ್ಲ, ಅದು ʻರಿಫೈನರಿ’ಗಳ ಪವರ್. ರಷ್ಯಾದಿಂದ ಅಗ್ಗವಾಗಿ ಕಚ್ಚಾ ತೈಲವನ್ನು ತಂದು, ಅದನ್ನ ಮಿನುಗುವ ಡೀಸೆಲ್ ಆಗಿ ಪರಿವರ್ತಿಸುವ ಜಾದೂಗಾರರು ನಮ್ಮ ಭಾರತ. ಅಸಲಿ ವಿಷಯವೇನೆಂದರೆ, ರಷ್ಯಾದ ಮೇಲೆ ನಿರ್ಬಂಧ ಹೇರಿರುವ ಯುರೋಪ್ ದೇಶಗಳಿಗೆ ಈಗ ಅದೇ ಡೀಸೆಲ್ ಬೇಕಾಗಿದೆ. ಭಾರತ ರಷ್ಯಾದ ತೈಲವನ್ನು ಸಂಸ್ಕರಿಸಿ ಯುರೋಪ್‌ಗೆ ಕಳುಹಿಸದಿದ್ದರೆ, ಲಂಡನ್‌ನಿಂದ ರೋಮ್‌ವರೆಗೆ ಜನ ಚಳಿಯಲ್ಲಿ ಗಡಗಡ ನಡುಗಬೇಕು, ಅವರ ಕಾರ್ಖಾನೆಗಳು ಶವದಂತೆ ಮಲಗಬೇಕು!

ಅಮೆರಿಕಾದ ʻಫೇಸ್ ಸೇವಿಂಗ್’ ನಾಟಕ!
ಅಮೆರಿಕಾಕ್ಕೆ ಈಗ ಚೆನ್ನಾಗಿ ಗೊತ್ತು, ಭಾರತ ಕೇಳೋ ಮನುಷ್ಯ ಅಲ್ಲ ಅಂತ. ಒಂದೂವರೆ ವರ್ಷದಿಂದ “ತಗೋಬೇಡಿ” ಅಂತ ಎಚ್ಚರಿಕೆ ಕೊಟ್ಟರೂ ಭಾರತ ಡೋಂಟ್ ಕೇರ್ ಅಂದಿತ್ತು. ಈಗ ಯುದ್ಧದ ಕಿಚ್ಚು ಹತ್ತಿಕೊಂಡ ಮೇಲೆ, ತೈಲ ಬೆಲೆ ಗಗನಕ್ಕೆ ಏರಿದರೆ ಅಮೆರಿಕಾದಲ್ಲಿರೋ ಟ್ರಂಪ್ ಅಥವಾ ಇನ್ಯಾರೋ ಪಿಂಪ್ ಆಗಲಿ, ಅವರ ಕುರ್ಚಿ ಅಲುಗಾಡುತ್ತದೆ. ಅದಕ್ಕೇ ಇವರು ಈಗ ಹೊಸದೊಂದು ಸ್ಟೋರಿ ಬಿಟ್ಟಿದ್ದಾರೆ: “ನಾವೇ ಪರ್ಮಿಷನ್ ಕೊಟ್ಟೆವು” ಎಂದು. ಅಂದರೆ, ಭಾರತ ಕೆಲಸ ಮಾಡಿದ ಮೇಲೆ “ನಾನೇ ಮಾಡಿಸಿದ್ದು” ಅಂತ ಬೆನ್ನು ತಟ್ಟಿಸಿಕೊಳ್ಳುವ ಈ ಟ್ರಿಕ್ ಇದು ಪಕ್ಕಾ ‘ಗಾಂಡು’ಗಳ ಕೆಲಸ!

ನಿಜ ಹೇಳಬೇಕೆಂದರೆ, ಭಾರತ ಇವತ್ತು ಜಗತ್ತಿನ ʻಪೆಟ್ರೋಲ್ ಬಂಕ್’ ಆಗಿ ಬದಲಾಗಿದೆ. ರಷ್ಯಾದ ತೈಲಕ್ಕೆ ಭಾರತವೇ ಈಗ ಹಾದಿ. ಅತ್ತ ರಷ್ಯಾದ ಜೇಬೂ ತುಂಬುತ್ತಿದೆ, ಇತ್ತ ಭಾರತದ ಆರ್ಥಿಕತೆಯೂ ಗಟ್ಟಿಯಾಗುತ್ತಿದೆ. ಈ ಮಧ್ಯೆ ಅಮೆರಿಕಾ 30 ದಿನಗಳ ʻಟೈಮ್ ಪಾಸ್’ ಪರ್ಮಿಷನ್ ಕೊಟ್ಟು ತನ್ನ ಮರ್ಯಾದೆ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ನೆನಪಿರಲಿ, ಭಾರತವನ್ನು ತಡೆದರೆ ಯುರೋಪ್ ಕತ್ತಲಲ್ಲಿ ಕೂರಬೇಕಾಗುತ್ತದೆ, ಆ ಕತ್ತಲೆಗೆ ಅಮೆರಿಕಾ ಹೆದರುತ್ತಿದೆ ಅಷ್ಟೇ!

error: Content is protected !!