ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಕೆಲವೊಂದು ಹಣ್ಣುಗಳನ್ನು ತಿನ್ನಬಾರದು ಎಂದು ವೈದ್ಯರು, ಹಿರಿಯರು ಶಿಫಾರಸು ಮಾಡುತ್ತಾರೆ. ಅವುಗಳಲ್ಲಿ ಪಪ್ಪಾಯಿ, ಅನಾಸನ್, ಕಪ್ಪು ದ್ರಾಕ್ಷಿಗಳು ಕೂಡ ಸೇರಿವೆ. ವಾಸ್ತವವಾಗಿ, ಅಂತಹ ಹಣ್ಣುಗಳು ಭ್ರೂಣದ ಬೆಳವಣಿಗೆಗೆ ಮಾರಕವಾಗಿದೆ. ಪಪ್ಪಾಯಿ ತನ್ನ ಅಸಾಧಾರಣ ಪೌಷ್ಟಿಕ ಸತ್ವದಿಂದ ಆರೋಗ್ಯಕ್ಕೆ ವರದಾನವಾಗಿದೆ. ಆದಾಗ್ಯೂ, ಗರ್ಭಿಣಿಯರು ಪಪ್ಪಾಯಿ ತಿನ್ನುವಂತಿಲ್ಲ.

ಇದರಲ್ಲಿ ಫೋಲಿಕ್ ಆಮ್ಲ, ಪೊಟ್ಯಾಸಿಯಮ್, ಫೈಬರ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಜೀರ್ಣಕ್ರಿಯೆಯಲ್ಲಿ ಹೆಚ್ಚಿಸಿ, ಮಲಬದ್ಧತೆ, ಉಬ್ಬುವುದು ಮತ್ತು ಎದೆಯುರಿ ಮುಂತಾದ ಸಾಮಾನ್ಯ ಗರ್ಭಾವಸ್ಥೆಯ ಅಸ್ವಸ್ಥತೆಗಳನ್ನು ನಿವಾರಿಸುತ್ತದೆ. ಹಾಗಾದರೆ ಪಪ್ಪಾಯಿ ಗರ್ಭಾವಸ್ಥೆಯಲ್ಲಿ ಸೇವಿಸಬಹುದೇ? ಸೇವಿಸುವುದಾದರೆ ಯಾವ ಸಮಯದಲ್ಲಿ ತಿನ್ನಬಹುದು?

ಗರ್ಭಿಣಿಯರು ಪಪ್ಪಾಯಿ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಕಂಡು ಬರುವ ಪಾಪೈನ್ ಕಿಣ್ವವು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ
ಇದು ಗರ್ಭಪಾತ ಅಥವಾ ಅಕಾಲಿಕ ಶಿಶು ಜನನದಂತಹ ಅಪಾಯವನ್ನು ಹೆಚ್ಚಿಸಬಹುದು. ಪಪ್ಪಾಯಿಯು ಆಮ್ನಿಯೋಟಿಕ್ ಚೀಲವನ್ನು ಛಿದ್ರಗೊಳಿಸಲು ಅಥವಾ ದ್ರವದ ನಷ್ಟಕ್ಕೆ ಕಾರಣವಾಗಬಹುದು. ಒಟ್ಟಾರೆ ಭ್ರೂಣಕ್ಕೆ ಅಪಾಯವನ್ನುಂಟುಮಾಡುತ್ತದೆ.

ಈ ರುಚಿಕರವಾದ ಹಣ್ಣು ದೇಹದಲ್ಲಿ ಈಸ್ಟ್ರೊಜೆನ್ನ ಪರಿಣಾಮಗಳನ್ನು ಅನುಕರಿಸುವ ಫೈಟೊಸ್ಟ್ರೊಜೆನ್‌ಗಳನ್ನು ಹೊಂದಿರುತ್ತದೆ. ಗರ್ಭಿಣಿಯರು ಪಪ್ಪಾಯಿಗಳನ್ನು ಸೇವಿಸುವುದರಿಂದ ಹಾರ್ಮೋನುಗಳ ಅಸಮತೋಲನಕ್ಕೆ ಅಡ್ಡಿಪಡಿಸುವ ಸಂಭವವಿದೆ. ಇದರ ಪರಿಣಾಮವು ನಿಮ್ಮ ಮಗುವು ಕಡಿಮೆ ತೂಕ, ಭ್ರೂಣದ ಬೆಳವಣಿಗೆ ಕುಂಠಿತ ಅಥವಾ ಅವಧಿಪೂರ್ವ ಹೆರಿಗೆಯಾಗುವ ಸಂಭವವಿರುತ್ತದೆ.

ನೀವು ಪಪ್ಪಾಯಿ ಹಣ್ಣಿನ ಪ್ರೇಮಿಗಳಾಗಿದ್ದರೆ ಗರ್ಭಾವಸ್ಥೆಯಲ್ಲಿ ತ್ಯಜಿಸುವುದು ಉತ್ತಮ ಎಂದು ವೈಧ್ಯರು ಸಲಹೆ ನೀಡುತ್ತಾರೆ. ಒಂದು ವೇಳೆ ನೀವು ತಿನ್ನಲೇಬೇಕು ಎಂದು ಬಯಸಿದರೆ ಮಿತವಾಗಿ ಮಾಗಿದ ಪಪ್ಪಾಯಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.