ವಾಷಿಂಗ್ಟನ್: ಅಮೆರಿಕಾ ಪಟೇಲ ಡೊನಾಲ್ಡ್ ಟ್ರಂಪ್‌ಗೆ ಇರುವ ಚಟ ಅಂದರೆ ಅದು ಕ್ರೆಡಿಟ್ ಪಡೆಯುವುದು. ರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಪಕ್ಕದ ದೇಶಗಳ ಹತ್ತಿರ “ಸಾರಿ ಸಾರ್, ನಮ್ಮಿಂದ ತಪ್ಪಾಯ್ತು” ಅಂತ ಕ್ಷಮೆ ಕೇಳಿದ್ದೇ ತಡ, ಟ್ರಂಪ್ ತನ್ನ ʻTruth Social’ ನಲ್ಲಿ ಹಬ್ಬ ಶುರು ಹಚ್ಚಿಕೊಂಡಿದ್ದಾರೆ. “ನಾನು ಮತ್ತು ಇಸ್ರೇಲ್ ಏಟು ಕೊಟ್ಟಿದ್ದಕ್ಕೆ ಇರಾನ್ ಈಗ ಶರಣಾಗಿದೆ. ನೆರೆಹೊರೆಯವರು ನನಗೆ ಥ್ಯಾಂಕ್ಯೂ ಅಂದಿದ್ದಾರೆ” ಅಂತ ಎದೆ ಉಬ್ಬಿಸಿ ಬರೆದುಕೊಂಡಿದ್ದಾರೆ.

ವಿಶೇಷವೆಂದರೆ ಇರಾನ್ ಕ್ಷಮೆ ಕೇಳಿದ್ದು ಅರೇಬಿಕ್ ರಾಷ್ಟ್ರಗಳ ಬಳಿ, ಆದರೆ ಟ್ರಂಪ್ ಅದಕ್ಕೆ “ಯುವರ್ ವೆಲ್ಕಮ್” ಅಂತ ರಿಪ್ಲೈ ಕೊಡ್ತಿದ್ದಾರೆ! ಅಂದರೆ, ಯಾರದೋ ಮದುವೆಯಲ್ಲಿ ಇವರು ಹೂವು ತಂದ ಕ್ರೆಡಿಟ್ ತಗೊಳ್ಳೋ ಪಕ್ಕಾ ಹಳ್ಳಿ ಕಿಲಾಡಿಯಂತೆ ವರ್ತಿಸುತ್ತಿದ್ದಾರೆ. ಇರಾನ್ ಈಗ ‘The Loser of Middle East’ ಅಂತೆ. ಅಷ್ಟೇ ಅಲ್ಲ, “ಮೇಕ್ ಇರಾನ್ ಗ್ರೇಟ್ ಅಗೇನ್ (MIGA)” ಅಂತ ಹೊಸ ಘೋಷಣೆ ಬೇರೆ ಬಿಟ್ಟಿದ್ದಾರೆ.

ಇರಾನ್ ಕೊಟ್ಟ ಖಡಕ್ ತಿರುಗೇಟು:
ಇತ್ತ ಟ್ರಂಪ್ ಇಷ್ಟೆಲ್ಲಾ ಸವಾರಿ ಮಾಡುತ್ತಿದ್ದರೆ, ಅತ್ತ ಟೆಹ್ರಾನ್‌ನಿಂದ ಪೆಜೆಶ್ಕಿಯನ್, “ನಾವು ಶರಣಾಗ್ತೀವಿ ಅನ್ನೋದು ಟ್ರಂಪ್ ಅವರ ಹಗಲುಗನಸು. ಆ ಆಸೆಯನ್ನು ಅವರು ತಮ್ಮ ಗೋರಿಯೊಳಗೆ ಕೊಂಡೊಯ್ಯಲಿ” ಅಂತ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಟ್ರಂಪ್ ಈಗ “ನಾನೇ ಇರಾನ್‌ಗೆ ಹೊಸ ಲೀಡರ್ ಆರಿಸ್ತೀನಿ” ಎಂದು ಹೇಳಿಕೆ ನೀಡಿದ್ದಾರೆ. ಯಾರೇ ಏನೇ ಮಾಡಿದ್ರೂ ಕಡ್ಡಿ ಅಲ್ಲಾಡಿಸುವುದು ಹೇಗೆ ಎಂದು ಟ್ರಂಪ್ ನೋಡಿ ಕಲಿಬೇಕು ಎಂದು ವಿಶ್ವ ಮಾತಾಡಿಕೊಳ್ಳುತ್ತಿದೆ.

