ಬೆಳಗಾವಿ: ಅಧಿಕಾರದ ಗೋಡೆಗಳೊಳಗೆ ಮೌನವಾಗಿದ್ದ ಒಂದು ವಿಡಿಯೋ, ಇಂದು ರಾಜ್ಯವನ್ನೇ ನಡುಗಿಸುವಂತೆ ಹೊರಬಿದ್ದಿದೆ! ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ , ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್. ಕಾನೂನಿನ ರಕ್ಷಕ, ಶಿಸ್ತಿನ ಸಂಕೇತ ಎಂದು ಕರೆಯಲ್ಪಟ್ಟ ಹೆಸರು…

ಆದರೆ ಈಗ ಅದೇ ಹೆಸರು ವೈರಲ್ ರಾಸಲೀಲೆ ವಿಡಿಯೋಯೋ ಒಂದಕ್ಕೆ ಥಳುಕು ಹಾಕಿಕೊಂಡಿದೆ. ಅಷ್ಟಕ್ಕೂ ಈ ವಿಡಿಯೋದ ಅಸಲಿಯತ್ ಏನು? ಈ ವಿಡಿಯೋವನ್ನು ತೆಗೆದವರು ಯಾರು? ವೈರಲ್ ಮಾಡಿದವರು ಯಾರು ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ. ಯಾರೋ ಎದುರಿನಲ್ಲಿ ನಿಂತು ವಿಡಿಯೋ ರೆಕಾರ್ಡ್ ಮಾಡಿರುವುದೋ ಅಥವಾ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿರುವುದೋ ಗೊತ್ತಾಗಿಲ್ಲ.

ಸೂಕ್ಷ್ಮವಾಗಿ ಸೆರೆಯಾಗಿದ್ದ ಈ ವಿಡಿಯೋ ಒಂದು ವರ್ಷದ ಹಿಂದಿನದು ಎಂದು ಹೇಳಲಾಗುತ್ತಿದೆ. ಆದರೆ ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟಗೊಂಡು, “ಇದು ಕಚೇರಿಯೇ… ಅಥವಾ ಕಾಮದಾಟದ ರಂಗಮಂದಿರವೇ?ʼ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ.
ವಿಡಿಯೋ ವಿಚಾರ ಬೆಳಗಾವಿಯಲ್ಲಿ ಸುದ್ದಿಗಾರರ ಮುಂದೆ ಕೇಳಿಬಂದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವನಿ ಗಂಭೀರವಾಗಿತ್ತು. “ಈ ವಿಷಯ ಇಂದು ಬೆಳಿಗ್ಗೆಯಷ್ಟೇ ನನಗೆ ಗೊತ್ತಾಯಿತು.
ಎಷ್ಟೇ ದೊಡ್ಡವರಾಗಲಿ, ತಪ್ಪಿದ್ದರೆ ಶಿಸ್ತು ಕ್ರಮ ತಪ್ಪದು. ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಿದ್ದೇನೆ.” ಎಂದಿದಾರೆ. ಒಂದು ಹೇಳಿಕೆಯಲ್ಲಿ ಆಡಳಿತದ ಆತಂಕ ಸ್ಪಷ್ಟವಾಗಿ ಕಾಣಿಸುತ್ತಿದೆ.

ಹಳೆಯ ವಿವಾದಗಳ ಕರಿ ನೆರಳು
ರಾಮಚಂದ್ರ ರಾವ್ ಹೆಸರು ಇದು ಮೊದಲ ಬಾರಿಗೆ ವಿವಾದಕ್ಕೆ ಸಿಲುಕಿದ್ದು ಅಲ್ಲ. ತಮ್ಮ ಮಲಮಗಳು, ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಾಗಲೇ, ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು.
ಆ ಬಳಿಕ ವಿವಾದದ ತಣ್ಣಗಾಗುತ್ತಿದ್ದಂತೆ ಅದೇ ಸರ್ಕಾರ ಅವರನ್ನು ಮತ್ತೆ ಡಿಜಿಪಿ ಹುದ್ದೆಗೆ ಮರುನೇಮಕ ಮಾಡಿತ್ತು. ಇದು ಕೇವಲ ವ್ಯಕ್ತಿಯ ನೈತಿಕ ಪತನವಲ್ಲ. ಇದು ವ್ಯವಸ್ಥೆಯೊಳಗಿನ ನಗ್ನ ಸತ್ಯ. ತನಿಖೆ ಯಾವ ದಿಕ್ಕು ಹಿಡಿಯುತ್ತದೆ? ವರದಿ ಯಾರನ್ನು ರಕ್ಷಿಸುತ್ತದೆ, ಯಾರನ್ನು ಬೀಳಿಸುತ್ತದೆ? ಎಂದು ಬೆಳಗಾವಿ ಮಾತ್ರವಲ್ಲ — ಇಡೀ ರಾಜ್ಯ ಈಗ ಉಸಿರುಗಟ್ಟಿ ನೋಡುತ್ತಿದೆ.
