ಚೇಳೈರು: ನೂತನ ಈಶ್ವರಾನಂದ ಭಜನಾ ಮಂದಿರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ

ಚೇಳೈರು: ಇಲ್ಲಿನ ನೂತನವಾಗಿ ನಿರ್ಮಾಣಗೊಂಡಿರುವ ಚೇಳೈರು ಈಶ್ವರಾನಂದ ಭಜನಾ ಮಂದಿರಕ್ಕೆ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಇತ್ತೀಚೆಗೆ ಭೇಟಿ ನೀಡಿದರು.

ಮಂದಿರಕ್ಕೆ ಭೇಟಿ ನೀಡಿದ ಶಾಸಕರನ್ನು ಮಂದಿರದ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಮಂದಿರದ ನಿರ್ಮಾಣ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಾನಂದ ಚೇಳೈರು, ಪುಷ್ಪರಾಜ್ ಶೆಟ್ಟಿ, ಮಾಜಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಸುಧಾಕರ ಶೆಟ್ಟಿ , ಪುರುಷೋತ್ತಮ, ಅಣ್ಣಪ್ಪ ಜಿ. ಕುಂದರ್, ಹರಿಯಪ್ಪ ಚೇಳೈರು, ರಮೇಶ್ ಪೂಜಾರಿ, ವೆಂಕಟೇಶ್ ಶೆಟ್ಟಿ, ಶಿವನಾಥ್, ಚಂದ್ರಶೇಖರ್ ಶೆಟ್ಟಿ, ಸಂಜೀವ ಚೇಳೈರು, ರಂಜಿತ್ ಪೂಜಾರಿ ತೋಡಾರು ಸೇರಿದಂತೆ ಹಲವು ಮುಖಂಡರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

error: Content is protected !!