ಮೂಲ್ಕಿ ಬೆಳ್ಳಾಯರುವಿನಲ್ಲಿ ಶೀಘ್ರ ನ್ಯಾಯಾಲಯ: ಶಾಸಕ ಉಮಾನಾಥ ಎ.ಕೋಟ್ಯಾನ್

ಮೂಲ್ಕಿ: ಮೂಲ್ಕಿ ತಾಲೂಕು ರಚನೆಯ ಬಳಿಕ ತಾಲೂಕು ನ್ಯಾಯಾಲಯ ಸ್ಥಾಪನೆಗೆ ಅಗತ್ಯ ಜಾಗ ಈಗಾಗಲೇ ಮಂಜೂರಾಗಿದ್ದು, ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ತಿಳಿಸಿದ್ದಾರೆ.

ಮೂಲ್ಕಿ ತಾಲೂಕಿನ ಬೆಳ್ಳಾಯರು ಗ್ರಾಮದ ಸರ್ವೆ ನಂ. 71/1ರಲ್ಲಿ 1.80 ಎಕರೆ ಜಾಗವನ್ನು ನ್ಯಾಯಾಲಯ ಕಟ್ಟಡಕ್ಕಾಗಿ ಮಂಜೂರು ಮಾಡಲಾಗಿದೆ. ಅಲ್ಲದೆ ನ್ಯಾಯಾಲಯದ ಸಿಬ್ಬಂದಿ ವಸತಿ ಗೃಹಗಳಿಗೂ (ಕ್ವಾರ್ಟರ್ಸ್) ಅಗತ್ಯ ಜಾಗವನ್ನು ಮಂಜೂರುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇದೇ ಗ್ರಾಮದಲ್ಲಿನ ಸರ್ವೆ ನಂ. 71/1ರಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೂ 10 ಸೆಂಟ್ಸ್ ಜಾಗ ಮಂಜೂರು ಮಾಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ನ್ಯಾಯಾಲಯ ಕಟ್ಟಡ ನಿರ್ಮಾಣದಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ತಾತ್ಕಾಲಿಕವಾಗಿ ಮೂಲ್ಕಿ ನಗರ ವ್ಯಾಪ್ತಿಯಲ್ಲೇ ನ್ಯಾಯಾಲಯ ಆರಂಭಿಸಲು ನಿರ್ಧರಿಸಲಾಗಿದೆ. ಈ ಕುರಿತು ಸೂಕ್ತ ಬಾಡಿಗೆ ಕಟ್ಟಡವನ್ನು ಹುಡುಕಲಾಗುತ್ತಿದ್ದು, ಕಟ್ಟಡ ಲಭ್ಯವಾದ ಕೂಡಲೇ ನ್ಯಾಯಾಲಯ ಕಾರ್ಯಾರಂಭಗೊಳ್ಳಲಿದೆ ಎಂದು ಉಮಾನಾಥ ಕೋಟ್ಯಾನ್ ತಿಳಿಸಿದರು.

error: Content is protected !!