ಜ.21ರಂದು ದಕ್ಷಿಣ ಭಾರತದ ಮೊದಲ RuTAGe ಸ್ಮಾರ್ಟ್ ವಿಲೇಜ್ ಸೆಂಟರ್‌ಗೆ ಚಾಲನೆ

ಮಂಗಳೂರು: ಭಾರತ ಸರ್ಕಾರದ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಮಾರ್ಗದರ್ಶನದಲ್ಲಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಮತ್ತು ಸೆಕ್ಷನ್ ಇನ್ಸಿನ್–8 ಫೌಂಡೇಶನ್ ಸಹಯೋಗದಲ್ಲಿ ದಕ್ಷಿಣ ಭಾರತದ ಮೊದಲ RuTAGe ಸ್ಮಾರ್ಟ್ ವಿಲೇಜ್ ಸೆಂಟರ್‌ ಜನವರಿ 21ರಂದು ಸ್ಥಾಪಿಸಲಾಗಲಿದೆ ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ.ಅಜಯ್ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಎನ್.ಸಿ. ಮೂರ್ತಿ ಅವರ ಉದಾರ ದೇಣಿಗೆಯಿಂದ ನಿಟ್ಟೆ ಹಾಗೂ ಫರಂಗಿಪೇಟೆ ಆರೋಗ್ಯ ಕೇಂದ್ರಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಾನಿ ಎನ್.ಸಿ. ಮೂರ್ತಿ, ನಿಟ್ಟೆ ಮತ್ತು ಫರಂಗಿಪೇಟೆಯಲ್ಲಿ ಸ್ಥಾಪನೆಯಾಗುತ್ತಿರುವ RuTAGe ಸ್ಮಾರ್ಟ್ ವಿಲೇಜ್ ಕೇಂದ್ರಗಳಿಗೆ ಬೆಂಬಲ ನೀಡುವುದೇ ನನಗೆ ಹೆಮ್ಮೆ. ತಂತ್ರಜ್ಞಾನವನ್ನು ಸ್ಥಳೀಯ ಜ್ಞಾನ ಮತ್ತು ಅಗತ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಈ ಕೇಂದ್ರಗಳು ರೈತರು, ಯುವಕರು ಮತ್ತು ಕೈಗಾರಿಕೆ ನಡೆಸುವವರಿಗೆ ಶಕ್ತಿ ನೀಡುತ್ತದೆ. ಸೌರ ವಿದ್ಯುತ್, ಆಧುನಿಕ ಕೃಷಿ ಉಪಕರಣಗಳು ಮತ್ತು ಡಿಜಿಟಲ್ ಶಿಕ್ಷಣದಂತಹ ಪರಿಹಾರಗಳು ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದರು.

ಡಾ. ಸಪ್ನಾ ಪೋಟಿ ಅವರು ಮಾತನಾಡುತ್ತಾ, ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಸಹಕಾರದಿಂದ, ನಾವು ತಂತ್ರಜ್ಞಾನವನ್ನು ಗ್ರಾಮೀಣ ಜನರಿಗೆ ತಲುಪಿಸುತ್ತಿದ್ದೇವೆ. ಈ ಮೂಲಕ ಸ್ವಾವಲಂಬಿ ಮತ್ತು ತಂತ್ರಜ್ಞಾನಾಧಾರಿತ ಗ್ರಾಮಗಳನ್ನು ನಿರ್ಮಿಸುವುದೇ ನಮ್ಮ ದೀರ್ಘಕಾಲದ ಗುರಿಯಾಗಿದೆ ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಎಸ್. ಮೂಡಿತಾಯ ಮಾತನಾಡಿ, ನಿಟ್ಟೆ ವಿಶ್ವವಿದ್ಯಾಲಯವು ಸಮುದಾಯಕ್ಕೆ ನವೀನತೆಯ ಮೇಲೆ ಸದಾ ಒತ್ತು ನೀಡಿದೆ. ಸಂಶೋಧನೆಯನ್ನು ನೇರವಾಗಿ ಗ್ರಾಮೀಣ ಜೀವನಕ್ಕೆ ತಲುಪಿಸುವ ಮೂಲಕ, RuTAGe ಸ್ಮಾರ್ಟ್ ವಿಲೇಜ್ ಕೇಂದ್ರಗಳು ಜೀವನೋಪಾಯ, ಶಿಕ್ಷಣ, ಆರೋಗ್ಯ ಮತ್ತು ಸ್ಥಿರತೆಯಲ್ಲಿ ಸ್ಪಷ್ಟ ಬದಲಾವಣೆ ತರಲಿವೆ. ರೈತರು, ವಿದ್ಯಾರ್ಥಿಗಳು, ಯುವಕರು ಮತ್ತು ಉದ್ಯಮಿಗಳೊಂದಿಗೆ ನೇರವಾಗಿ ಕೆಲಸ ಮಾಡುವ ಮೂಲಕ, ಈ ಕೇಂದ್ರಗಳು ಸ್ಥಳೀಯ ಅಗತ್ಯಗಳಿಗೆ ತಕ್ಕ ತಂತ್ರಜ್ಞಾನಗಳನ್ನು ಅಳವಡಿಸುತ್ತವೆ ಎಂದರು.

ಎನ್.ಸಿ. ಮೂರ್ತಿ ಮತ್ತು ಇವರ ಶ್ರೀಮತಿಯ ಉಪಸ್ಥಿತಿಯಲ್ಲಿ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ (PSA) ಡಾ. ಸಪ್ನಾ ಪೋಟಿ (ಡೈರೆಕ್ಟರ್ – ಸ್ಮಾಟಜಿಕ್ ಅಲಯನ್ನಸ್) RuTAGe ಸ್ಮಾರ್ಟ್ ವಿಲೇಜ್ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ಶಿವಕಿರಣ್ (RSVC ಗವರ್ನಿಂಗ್ ಕೌನ್ಸಿಲ್ ಸದಸ್ಯ), ವಿಷ್ಣಾಸ್ ಯು.ಎಸ್. (ಸೆಕ್ಷನ್ ಇನ್ಸಿನ್-8 ಫೌಂಡೇಶನ್ ಸಂಸ್ಥಾಪಕ-ನಿರ್ದೇಶಕರು), ಪ್ರೊ. ಇಡ್ಕ ಕರುಣಾಸಾಗರ ಮತ್ತು ಡಾ. ಇಂದ್ರಾಣಿ ಕರುಣಾಸಾಗರ (ನಿಟ್ಟೆ ವಿಶ್ವವಿದ್ಯಾಲಯ) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು ಎಂದು ಆಯೋಜಕರು ಮಾಹಿತಿ ನೀಡಿದರು.

error: Content is protected !!