“ತನ್ನ ತಂಡವು ಭಾರತದಲ್ಲಿ ಸುರಕ್ಷಿತವಲ್ಲ” ಎಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ; ಐಸಿಸಿ ಲಾಸ್ಟ್ ವಾರ್ನಿಂಗ್

ICC 2026: ಟಿ20 ವಿಶ್ವಕಪ್ ಟೂರ್ನಿಗೆ ಭಾರತಕ್ಕೆ ತಂಡವನ್ನು ಕಳುಹಿಸದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ವಿವಾದವು ನಿರಂತರವಾಗಿ ನಡೆಯುತ್ತಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಇದರ ಮಧ್ಯ ಪ್ರವೇಶಿಸಿ ವಿವಾದವನ್ನು ಪರಿಹರಿಸಲು ಬಾಂಗ್ಲಾದೇಶ ಕ್ಕೆ ಕೊನೆಯ ಎಚ್ಚರಿಕೆ ಕೊಟ್ಟಿದೆ. ಟಿ20 ವಿಶ್ವಕಪ್‌ನಲ್ಲಿ ತಂಡ ಭಾಗವಹಿಸುತ್ತದೆಯೇ ಎಂದು ಜನವರಿ 21 ರೊಳಗೆ ತಿಳಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಐಸಿಸಿ ಗಡುವು ನೀಡಿದೆ.


ಬಾಂಗ್ಲಾದೇಶ ಮತ್ತೊಮ್ಮೆ ತನ್ನ ತಂಡವು ಭಾರತದಲ್ಲಿ ಸುರಕ್ಷಿತವಾಗಿಲ್ಲ ಎಂಬ ವಿಚಾರವನ್ನು ಎತ್ತುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಆಡುವ ಬಯಕೆಯನ್ನು ಅದು ವ್ಯಕ್ತಪಡಿಸಿತು. ಆದರೆ ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಬೇಡಿಕೆಯನ್ನು ಪುನರುಚ್ಚರಿಸಿತು. ಆದರೆ ಬಾಂಗ್ಲಾದೇಶ ಅಥವಾ ಯಾವುದೇ ನಿರ್ದಿಷ್ಟ ತಂಡಕ್ಕೆ ಭಾರತದಲ್ಲಿ ಭದ್ರತಾ ಬೆದರಿಕೆ ಇಲ್ಲ ಎಂದು ಐಸಿಸಿ ಬಿಸಿಬಿಗೆ ತಿಳಿಸಿದೆ.

 

error: Content is protected !!