ಮಂಗಳೂರು: ಕುತ್ತೆತ್ತೂರು ಸೂರಿಂಜೆ ಶಿಬರೂರು ಕೈಯೂರು ಪಂಜ ಸೂರಿಂಜೆ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿಯನ್ನು ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಚಿಸಲಾಯಿತು.

ಸಮಿತಿಗಯ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರು ರಾಜೇಂದ್ರ ಶೆಟ್ಟಿ ಕುಡ್ತಿಮಾರ್ ಗುತ್ರು, ಕಾರ್ಯಾಧ್ಯಕ್ಷರಾಗಿ ಮನೋಹರ ಶೆಟ್ಟಿ ಬೊಳ್ಳಾರುಗುತ್ತು ಸೂರಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಸೂರಿಂಜೆ, ಕೋಶಾಧಿಕಾರಿಯಾಗಿ ಸುಜೀರ್ ಶೆಟ್ಟಿ ಸೂರಿಂಜೆ ಆಯ್ಕೆಯಾದರು.

ಹಯವದನ ಭಟ್ ಕೈಯೂರು, ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಅಸ್ರಣ್ಣ, ರಾಜೇಂದ್ರ ಶೆಟ್ಟಿ ಕುಡ್ತಿಮಾರ್ ಗುತ್ತು, ನಾರಾಯಣ ಶೆಟ್ಟಿ ಬ್ರಹ್ಮಸ್ಥಾನ, ಜಗನ್ನಾಥ ಶೆಟ್ಟಿ ತೇವು ಸೂರಿಂಜೆ, ಅನಿಲ್ ಶೆಟ್ಟಿ ತೇವು ಸೂರಿಂಜೆ, ಮನೋಹರ ಶೆಟ್ಟಿ ಸೂರಿಂಜೆ ಉಪಸ್ಥಿತರಿದ್ದರು.

ಪಂಚ ದೈವಗಳ ನೇಮೋತ್ಸವವನ್ನು ಎಪ್ರಿಲ್ 3 ತಾರೀಖಿನಿಂದ ಎಪ್ರಿಲ್ 7 ರವರೆಗೆ ಜರಗಿಸಲು ತೀರ್ಮಾನಿಸಲಾಯಿತು.