ಮಂಗಳೂರಿನ ವಿನಿತ್ ಎಸ್ ಸುವರ್ಣ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಮಂಗಳೂರು: ಬೆಂಗಳೂರು ಕೋರಮಂಗಲ ಇಂಡೋರ್ ಸ್ಟೇಡಿಯಂ ನಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯಮಟ್ಟದ ಪಂದ್ಯಾಟದಲ್ಲಿ ವಿನಿತ್ ಎಸ್ ಸುವರ್ಣ 17 ವರ್ಷದ ವಯೋಮಿತಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಇವರು ಶ್ರೀ ಶರತ್ ಕುಮಾರ್ ಮತ್ತು ಶ್ರೀಮತಿ ಸವಿತಾ ಶರತ್ ಬೆಳ್ಳಾಯರು ದಂಪತಿಗಳ ಸುಪುತ್ರನಾದ ವಿನಿತ್‌ ಅವರು ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಾಗರಾಜ್ ಕುಲಾಲ್ ಇವರಿಂದ ಕರಾಟೆ ತರಬೇತಿಯನ್ನು ಪಡೆದಿರುತ್ತಾರೆ.

error: Content is protected !!